ಬೆಳ್ಳಾರೆ ವಾರದ ಸಂತೆ ಸ್ಥಳಾಂತರಗೊಂಡು ಉದ್ಘಾಟನೆ, ಸಮುದಾಯ ನೈರ್ಮಲ್ಯ ಸಂಕೀರ್ಣದ ಲೋಕಾರ್ಪಣೆ

0

ಬೆಳ್ಳಾರೆ ವಾರದ ಸಂತೆ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆಗೆ ಸ್ಥಳಾಂತರ ಮತ್ತು ಸಮುದಾಯ ನೈರ್ಮಲ್ಯ ಸಂಕೀರ್ಣದ ಲೋಕಾರ್ಪಣೆ ಕಾರ್ಯಕ್ರಮವು ನ. 12 ರಂದು ನಡೆಯಿತು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ರಿಬ್ಬನ್ ಕತ್ತರಿಸಿ ಸಂತೆ ಮಾರುಕಟ್ಟೆಯನ್ನು ಉದ್ಘಾಟಿಸಿದರು.


ಸಹಕಾರಿ ಸಂಘದ ನಿರ್ದೇಶಕ ಶ್ರೀರಾಮ ಪಾಟಾಜೆ ದೀಪ ಬೆಳಗಿಸಿ ಶುಭಹಾರೈಸಿದರು.
ಸಮುದಾಯ ನೈರ್ಮಲ್ಯ ಸಂಕೀರ್ಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯರಾದ ಭವ್ಯ ರವಿಕುಮಾರ್,ಜಯಶ್ರೀ, ವೀಣಾ,ಮಣಿಕಂಠ,ಅನಿಲ್ ರೈ ಚಾವಡಿಬಾಗಿಲು, ಎನ್.ಎಸ್.ಡಿ.ವಿಠಲದಾಸ್, ದಿನೇಶ್ಚಂದ್ರ, ನಮಿತಾ ರೈ,ಶ್ವೇತಾ ಶೈಲೇಶ್,ಮೀನಾ ಎಂಟರ್ ಪ್ರೈಸಸ್ ನ ಗಣೇಶ್ ಭಟ್, ಗಂಗಾಧರ ರೈ ಪುಡ್ಕಜೆ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಶೈಲೇಶ್ ನೆಟ್ಟಾರು,ಪ್ರವೀಣ್ ಚಾವಡಿಬಾಗಿಲು, ವಸಂತ ಉಲ್ಲಾಸ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಶೇಖರ ಕಾಮತ್, ಎ.ಪಿ.ಎಂ. ಸಿ ಮಾಜಿ ಉಪಾಧ್ಯಕ್ಷರಾದ ನವೀನ್ ಕುಮಾರ್ ಸಾರಕರೆ,ಬೆಳ್ಳಾರೆಯ ವರ್ತಕರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.