ರಾಜ್ಯ ಇಂಡಿಯನ್ ರೇಡಿಯೋಲಾಜಿಕಲ್ & ಇಮೇಜಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಡಾ. ಐಶ್ವರ್ಯ ಗೌತಮ್

0

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಮತ್ತು ಶ್ರೀಮತಿ ಶೋಭ ಚಿದಾನಂದರ ಪುತ್ರಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್(AOLE ) ನ ನಿರ್ದೇಶಕಿ ಡಾ. ಐಶ್ವರ್ಯ ಗೌತಮ್ ರವರು 2023 -24 ಸಾಲಿನ ಇಂಡಿಯನ್ ರೇಡಿಯೋಲಾಜಿಕಲ್ & ಇಮೇಜಿಂಗ್ ಅಸೋಸಿಯೇಷನ್ (ಕರ್ನಾಟಕ ಘಟಕ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಡಾ. ಐಶ್ವರ್ಯರವರು ಈ ಹಿಂದೆ ಕರ್ನಾಟಕ ರಾಜ್ಯಪಾಲರ ಆದೇಶದನುಸಾರ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ನೇಮಕಗೊಂಡಿದ್ದರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವಿಕಿರಣಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಡಾ. ಐಶ್ವರ್ಯ ರಾಷ್ಟ್ರಿಯ ವೈದ್ಯಕೀಯ ಮಂಡಳಿಯ ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿಕಿರಣಶಾಸ್ತ್ರ ಸ್ನಾತಕೋತ್ತರ ಪದವಿಯ ಪಠ್ಯಕ್ರಮ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಕೆ.ವಿ.ಜಿ ಸಮೂಹ ಸಂಸ್ಥೆಗಳ ಶೈಕ್ಶಣಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ ಐಶ್ವರ್ಯ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದರ ಮಾರ್ಗದರ್ಶನದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಸಾರುತ್ತ ಬಂದಿರುತ್ತಾರೆ. ಡಾ. ಐಶ್ವರ್ಯರನ್ನು
ಐಶ್ವರ್ಯರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ಅಕಾಡೆಮಿಯ ನಿರ್ದೇಶಕರುಗಳು, ವೈದ್ಯಕೀಯ ಕಾಲೇಜಿನ ಡೀನ್ ಡಾ. ನೀಲಾಂಬಿಖೈ ನಟರಾಜನ್ ಮತ್ತು ಸಿಬಂದಿವರ್ಗದವರು ಅಭಿನಂದಿಸಿದ್ದಾರೆ.