ಸೀತಾರಾಮ ಭಟ್ ಕಟ್ಟೆಹಿತ್ಲು ನಿಧನ

0


ಕಲ್ಮಡ್ಕ ಗ್ರಾಮದ ಕಟ್ಟೆಹಿತ್ಲು ಸೀತಾರಾಮ ಭಟ್ ನ. 7ರಂದು ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಕಲ್ಮಡ್ಕ ಶ್ರೀರಾಮ ಭಜನಾ ಮಂದಿರದ ಟ್ರಸ್ಟಿಯಾಗಿ, ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ, ಕಲ್ಮಡ್ಕ ಸಂಗಮ ಕಲಾ ಸಂಘದ ಸದಸ್ಯರಾಗಿ ದುಡಿದಿರುವುದಲ್ಲದೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಮೃತರು ಪತ್ನಿ ಶ್ರೀಮತಿ ಪೂರ್ಣಿಮಾ, ಸಹೋದರ ಸುಬ್ರಹ್ಮಣ್ಯ ಭಟ್, ಇಬ್ಬರು ಸಹೋದರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ