ಸುಳ್ಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಮತದಾರ ಜಾಗೃತಿ ಜಾಥಾ

0


ಭಾರತ ಚುನಾವಣಾ ಆಯೋಗ ತಾಲೂಕು ಆಡಳಿತ ಸುಳ್ಯ, ಸ್ವೀಪ್ ಸಮಿತಿ ಸುಳ್ಯ ಇದರ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2023 ಇದರ ಅಂಗವಾಗಿ ರಾಜಕೀಯ ಮುಖಂಡರ,ಜನಪ್ರತಿನಿಧಿಗಳ,ಚುನಾವಣಾ ಜಾಗೃತಿ ಸಂಘ,ಮತದಾರ ಸಾಕ್ಷರತಾ ಸಂಘ,ರಾಷ್ಟ್ರೀಯ ಸೇವಾ ಯೋಜನೆ,ರಾಷ್ಟ್ರೀಯ ಸೈನ್ಯ ದಳ,ಯುವ ರೆಡ್ ಕ್ರಾಸ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ಮತದಾರ ಜಾಗೃತಿ ಜಾಥ ಸುಳ್ಯ ತಾಲೂಕು ಕಛೇರಿ ಮುಂಭಾಗದಿಂದ ಆರಂಭಗೊಂಡು ನಗರದಲ್ಲಿ ಮತದಾರ ಜಾಗೃತಿ ಜಾಥ ಸಾಗಿತ್ತು.


ಸುಳ್ಯ ತಹಶಿಲ್ದಾರರ ಅನಿತಾ ಲಕ್ಷ್ಮಿ ಜಾಗೃತಿ ಜಾಥಕ್ಕೆ ಚಾಲನೆ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್,ನೆಹರು ಮೆಮೊರಿಯಲ್ ಕಾಲೇಜು ಉಪನ್ಯಾಸಕರಾದ ಸಂಜೀವ ಕುದ್ಪಾಜೆ,ಚಿತ್ರಲೇಖ,ಶೋಭ,ಉಪತಹಶಿಲ್ದಾರ್ ಚಂದ್ರಕಾಂತ, ಚುನಾವಣಾ ಶಾಖೆ ಅಭಿಷೇಕ್,ಸುಳ್ಯ ಗ್ರಾಮಲೆಕ್ಕಧಿಕಾರಿ ಮೊದಲಾದವರು ಇದ್ದರು.


ನೆಹರು ಮೆಮೊರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ & ರೇಂಜರ್, ಎನ್ ಸಿಸಿ ಸಂಸ್ಥೆಯ ವಿದ್ಯಾರ್ಥಿಗಳು ಜಾಗೃತಿ ಜಾಥದಲ್ಲಿ ಭಾಗವಹಿಸಿದರು.