ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಬೆಳ್ಳಾರೆ ಗ್ರಾಮದ ಕಲ್ಲೋಣಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಕಲ್ಲೋಣಿ ವಾರ್ಡ್ ಸದಸ್ಯರಾದ ಶ್ರೀಮತಿ ಭವ್ಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಾಲವಿಕಾಸ ಸಮಿತಿಯ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ ಹಾಗೂ ಸದಸ್ಯರುಗಳು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸೀತಾ ಮತ್ತು ಶ್ರೀಮತಿ ಹರಿಣಿ ಹಾಗೂ ಮಕ್ಕಳ ಪೋಷಕರು ಮಕ್ಕಳು ಹಾಗೂ ಅಂಗನವಾಡಿ ಸಹಾಯಕಿ ಹಾಜರಿದ್ದರು.

ಮಕ್ಕಳಿಗೆ ಬಹುಮಾನ ವಿತರಸಲಾಯಿತು. ಈ ಕಾರ್ಯಕ್ರಮಕ್ಕೆ ಬಹುಮಾನವನ್ನು ದೀಪ CJHC ಮೈಸೂರುರವರು ಮತ್ತು ಉಪಹಾರದ ವ್ಯವಸ್ಥೆಯನ್ನು ಶ್ರೀಮತಿ ಜಯಲಕ್ಷ್ಮೀ ಚಿಮುಳ್ಳು ಪ್ರಾಯೋಜಿಸಿದರು. ಅಂಗನವಾಡಿ ಕಾರ್ಯಕರ್ತೆ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.