ಪೆರಾಜೆ : ಮಕ್ಕಳ ದಿನಾಚರಣೆ ಮತ್ತು ಕ್ರೀಡಾಕೂಟ ಸಮಾರಂಭ

0


ನವಂಬರ್ 14ರ ಮಕ್ಕಳ ದಿನಾಚರಣೆ ಮತ್ತು ಕ್ರೀಡಾಕೂಟ ಸಮಾರಂಭವು ಸ ಕಿ. ಪ್ರಾ.ಶಾಲೆ ಕುಂಡಾಡು ಪೆರಾಜೆಯಲ್ಲಿ ನಡೆಯಿತು.

ಶಾಲಾಭಿವೃದ್ಧಿ ಸಮಿತಿ,ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ ಸಾರ್ವಜನಿಕರ ಉಪಸ್ಥಿತಿಯಲ್ಲಿ ಕ್ರೀಡಾಕೂಟದ ಸಮಾರಂಭ ಉದ್ಘಾಟನೆ ಮತ್ತು ಶಾಲಾ ಸ್ಥಳ ದಾನಿಗಳಾದ ಶ್ರೀಮತಿ ಕುಸುಮಾವತಿ ಸುಬ್ಬಯ್ಯ ಅವರ ಸನ್ಮಾನ ಕಾರ್ಯಕ್ರಮವು

ನಡೆಯಿತು. ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀಮತಿ ಚಂದ್ರಕಲಾ ಅಧ್ಯಕ್ಷರು ಗ್ರಾ. ಪಂ.ಪೆರಾಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ.ಅಧ್ಯಕ್ಷರಾದ ಶ್ರೀ ಯತೀಶ್ ಸಿ ಎಸ್ ವಹಿಸಿದ್ದರು. ವೇದಿಕೆಯಲ್ಲಿ ನಂಜಪ್ಪ ನಿಡ್ಯಮಲೆ, ಶ್ರೀಮತಿ ಜಯಲಕ್ಷ್ಮಿ , ಶ್ರೀಮತಿ ಪೂರ್ಣಿಮಾ, ಜೀವಿತ್ ಮತ್ತು ಶ್ರೀಮತಿ ರೇಖಾ ಅವರು ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ ಅಂಗನವಾಡಿ ಪುಟಾಣಿಗಳಿಗೆ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಗ್ಗ ಜಗ್ಗಾಟ ವೇಗದ ನಡಿಗೆ, ಗುಡ್ಡಗಾಡು ಓಟ ಸೇರಿದಂತೆ ವಿವಿಧ ಆಟೋಟಗಳು ದಿನವಿಡೀ ನಡೆದವು.ಸಂಜೆ ನಡೆದ ಸಮರೋಪ ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಶ್ರೀ ಗೋಪಾಲ ಪೆರಾಜೆ ಭಾಗವಹಿಸಿ ಬಹುಮಾನ ವಿತರಿಸಿದರು. ತಮ್ಮ ಭಾಷಣದಲ್ಲಿ ಅವರು “ಸರಕಾರಿ ಶಾಲೆ ಎಂಬುದು ಒಂದು ಸಾರ್ವಜನಿಕ ವ್ಯವಸ್ಥೆಯಾಗಿದ್ದು ಅದನ್ನು ಅಭಿವೃದ್ಧಿಗೊಳಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಇಂದು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳೇ ಮುಂದಿನ ಸಮಾಜದ ಆಸ್ತಿ .ಈ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದಲೂ ಕೂಡ ಮಕ್ಕಳು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ” ಎಂದರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಯತೀಶ್ ಸಿ ಎಸ್ ಅಧ್ಯಕ್ಷರು, ಎಸ್‌.ಡಿ.ಎಂ.ಸಿ, ಶ್ರೀಮತಿ ಪುನಿತಾ ಕೆ ಎಸ್ ಉಪಾಧ್ಯಕ್ಷರು ಎಸ್‌.ಡಿ.ಎಂ.ಸಿ, ಕೆ ಸಿ.ಧನಂಜಯ ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘ, ಶ್ರೀಮತಿ ಕೆ ಪೂರ್ಣಿಮಾ ಗ್ರಾ.ಪಂ ಸದಸ್ಯರು, ಮೋನಿಶ್ ವಿದ್ಯಾರ್ಥಿ ನಾಯಕ ಮತ್ತು ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಎನ್ ಎಸ್ ಕುಮಾರ ಉಪಸ್ಥಿತರಿದ್ದರು.