ಪಂಜ:ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ”
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳು ಅನಾವರಣ ಗೊಳ್ಳ ಬೇಕು: ಎಸ್ ಅಂಗಾರ
ಇಂದು ಹೊನಲು ಬೆಳಕಿನ ಪಂದ್ಯಾಟ, ನಾಳೆ ಸಮಾರೋಪ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ತಾಲೂಕು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪಂಜ ಇವರ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ-2022 ನ.18 ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜ್ ನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ಜರುಗಿತು.


ಪಂದ್ಯಾಟವನ್ನು ಕರ್ನಾಟಕ ಸರಕಾರ ಮೀನುಗಾರಿಕೆ ಬಂದರು ಮತ್ತು ಜಲಸಾರಿಗೆ ಸಚಿವ ಎಸ್ ಅಂಗಾರ ರವರು ಸಭಾಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡಿ ” ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗಳ ಅಭಿಮಾನ ಬೇಕು. ಕ್ರೀಡೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ರಾಜ್ಯ ಮತ್ತು ಕೇಂದ್ರ ಸರಕಾರ ಕ್ರೀಡೆಗಳಿಗೆ ಪೂರಕವಾದ ಅವಶ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಿದೆ. ಇವುಗಳನ್ನು ಸದ್ಬಳಕೆ ಮಾಡಿ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಗಳು ಅನಾವರಣ ಗೊಳ್ಳಬೇಕು” ಎಂದು ಅವರು ಹೇಳಿದರು.


ತಾಲೂಕಿಗೆ ಮೂರು ಮ್ಯಾಟ್ :
ಕಬಡ್ಡಿ ಪಂದ್ಯಾಟಗಳನ್ನು ಪ್ರೋತ್ಸಾಹಿಸಿಲು ವೈಯಕ್ತಿಕವಾಗಿ ಒಂದು ಮ್ಯಾಟ್ ಒದಗಿಸಿದ್ದೇನೆ. ಸಂಸದರು ಒಂದು ಮ್ಯಾಟ್ ಹಾಗೂ ರಾಜ್ಯ ಸರಕಾರ ಒಂದು ಮ್ಯಾಟ್ ನೀಡಲಿದ್ದು. ಸುಳ್ಯ ತಾಲೂಕಿಗೆ ಒಟ್ಟು 3 ಮ್ಯಾಟ್ ಒದಗಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿನ ಕೋಟಿ ಚೆನ್ನಯ ಕ್ರೀಡಾಂಗಣಕ್ಕೆ ಇನ್ನಷ್ಟು ಅನುದಾನ ನೀಡುತ್ತೇನೆ ಎಂದು ಅವರು ಹೇಳಿದರು.


ಅತಿಥಿಗಳಾಗಿ ಮಂಗಳೂರು ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ ವಿ ತೀರ್ಥರಾಮ, ರಾಜ್ಯ ಒಕ್ಕಲಿಗ ರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ‌ ವಿ, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ,ಸುಳ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಎನ್ ಎ ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್ ಪಿ , ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ,
ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು ಕೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ ಟಿ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೂಫಿ ಪೆರಾಜೆ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಭುವನೇಶ್ , ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಾಧವ ಬಿ ಕೆ, ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು, ಎಸ್ ಡಿ ಎಂ ಸಿ ಅಧ್ಯಕ್ಷ ಗಣೇಶ ಜೋಯಿಸ,
ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿನ್ನಪ್ಪ ಕಾಣಿಕೆ , ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ , ಮುಖ್ಯ ಶಿಕ್ಷಕ ಟೈಟಸ್ ವರ್ಗೀಸ್,ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಲಪತಿ ,ವಿವಿಧ ಶಿಕ್ಷಣ ಇಲಾಖೆ ಯ ಪದಾಧಿಕಾರಿಗಳು, ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರೀಡಾಂಗಣವನ್ನು ಸಚಿವ ಎಸ್ ಅಂಗಾರ ಉದ್ಘಾಟಿಸಿ ,ಬಳಿಕ ಅವರು ಅತಿಥಿಗಳು ಜೊತೆಗೆ ಎಲ್ಲಾ ತಂಡಗಳನ್ನ ಭೇಟಿ ನೀಡಿ ಸ್ವಾಗತಿಸಿದರು.

ಸನ್ಮಾನ : ಹೊಸ ಮ್ಯಾಟ್ ಒದಗಿಸಿ ಕೊಟ್ಟ ಮತ್ತು ಕ್ರೀಡಾಂಗಣಕ್ಕೆ ಅನುದಾನ ನೀಡಿದ ಸಚಿವರ ಎಸ್ ಅಂಗಾರ ರವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕೃತ ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೂಫಿ ಪೆರಾಜೆ ಸ್ವಾಗತಿಸಿದರು.ಭುವನೇಶ್ ಪ್ರಾಸ್ತಾವಿಕ ಗೈದರು.
ಸೋಮಶೇಖರ ನೇರಳ ನಿರೂಪಿಸಿದರು.ಟೈಟಸ್ ವರ್ಗಿಸ್ ವಂದಿಸಿದರು.


ಇಂದು ಹೊನಲು ಬೆಳಕಿನ ಪಂದ್ಯಾಟ:
ಸಂಜೆ ಹೊನಲು ಬೆಳಕಿನ ಪಂದ್ಯಾಟ ಉದ್ಘಾಟನೆ ಗೊಳ್ಳಲಿದೆ.ನ.19 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದೆ.ಪಂದ್ಯಾಟದಲ್ಲಿದಕ್ಷಿಣ ಕನ್ನಡ,ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ, ಉಡುಪಿ, ಮೈಸೂರು, ಚಿಕ್ಕಮಂಗಳೂರು ಜಿಲ್ಲಾ ಒಟ್ಟು 32 ತಂಡಗಳು ಪಾಲ್ಗೊಂಡಿವೆ.14 ರ ವಯೋಮಿತಿಯ ಬಾಲಕರ 8 ತಂಡ ಮತ್ತು 17 ವಯೋಮಿತಿಯ ಬಾಲಕರ 8 ತಂಡ , 14 ರ ವಯೋಮಿತಿಯ ಬಾಲಕಿಯರ 8 ತಂಡ 17ರ ವಯೋಮಿತಿಯ ಬಾಲಕಿಯರ 8 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ.