ಕೊಡಿಯಾಲ ಗ್ರಾಮ ಪಂಚಾಯತ್ ಗ್ರಾಮ ಸಭೆ, ಸ್ಮಶಾನ ಜಾಗ, ರಸ್ತೆ, ಕುಡಿಯುವ ನೀರಿನ ಬಗ್ಗೆ ತೀವ್ರ ಚರ್ಚೆ

0

ಕೊಡಿಯಾಲ ಗ್ರಾಮ ಪಂಚಾಯತ್ ನ 2021-22 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳರವರ ಅಧ್ಯಕ್ಷತೆಯಲ್ಲಿ ನ.18 ರಂದು ಗ್ರಾಮ ಪಂ.ಸಭಾಂಗಣದಲ್ಲಿ ನಡೆಯಿತು.


ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ಸುಂದರಯ್ಯರವರು ನೋಡೆಲ್ ಅಧಿಕಾರಿಯಾಗಿದ್ದರು.
ಸ್ಮಶಾನ ಜಾಗ, ರಸ್ತೆ ಅಭಿವೃದ್ಧಿ,ಕುಡಿಯುವ ನೀರು ಮತ್ತಿತರ ವಿಷಗಳ ಬಗ್ಗೆ ತೀವ್ರ ಚರ್ಚೆಗಳು ನಡೆದವು.


ಪಂಚಾಯತ್ ಸಿಬ್ಬಂದಿಗಳು ಪ್ರಾರ್ಥಿಸಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ, ಸಿಬ್ಬಂದಿ ರಾಜೇಶ್ವರಿ ವರದಿ ಮಂಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯರಾದ ಕರುಣಾಕರ ಆಳ್ವ, ಶ್ರೀಮತಿ ಚಿತ್ರಾ, ಶ್ರೀಮತಿ ವಿಜಯ ಕುಮಾರಿ, ಶ್ರೀಮತಿ ಯಶವಂತಿ ಉಪಸ್ಥಿತರಿದ್ದರು.


ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ.ಅನುಷಾ ಆರ್ವಾರ ವಂದಿಸಿದರು.