ಕೊಡಗು ಸಂಪಾಜೆ : ಮದ್ಯವರ್ಜನಾ ಶಿಬಿರದ ಉದ್ಘಾಟನಾ ಸಮಾರಂಭ

0


ಪದ್ಮವಿಭೂಷಣ ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಶ್ರೀ ಮಂಜುನಾಥೇಶ್ವರ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ ಉಜಿರೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಕೊಡಗು ಸಂಪಾಜೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರಗಳು ಕೊಡಗು ಸಂಪಾಜೆ, ನವಜೀವನ ಸಮಿತಿ, ಶೌರ್ಯ ವಿಪತ್ತು ಘಟಕ ಕೊಡಗು ಸಂಪಾಜೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಗ್ರಾಮ ಪಂಚಾಯತ್ ಕೊಡಗು ಸಂಪಾಜೆ, ಮದೆನಾಡು, ಚೆಂಬು, ಪೆರಾಜೆ, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕೊಡಗು ಸಂಪಾಜೆ, ಮದೆನಾಡು, ಪೆರಾಜೆ, ಶ್ರೀ ಭಗವಾನ್ ಸಂಘ ಊರುಬೈಲು ಚೆಂಬು ಇವರ ಸಹಯೋಗದೊಂದಿಗೆ ೧೬೧೮ ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ನ. ೧೯ರಂದು ನಡೆಯಿತು.


ಸಮಾರಂಭದ ಉದ್ಘಾಟನೆಯನ್ನು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಬಿ ಸದಾಶಿವರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ೧೬೧೮ ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತ ಎನ್.ಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ೧೬೧೮ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕೊಡಗು ಇದರ ಗೌರವಾಧ್ಯಕ್ಷ ಶಿವರಾಂ ಬಿ.ಆರ್ , ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ನಿರ್ಮಲ ಭರತ್, ಕೊಡಗು ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್, ಸಂಪಾಜೆ ವಲಯ ಪೊಲೀಸ್ ಠಾಣೆಯ ಎ. ಎಸ್.ಐ ಶ್ರೀನಿವಾಸ, ಕೊಯನಾಡು ಗಣಪತಿ ದೇವಸ್ಥಾನದ ಅಧ್ಯಕ್ಷ ಪಿ.ಡಿ. ವಿಶ್ವನಾಥ , ನವಮಿ ಸ್ಟೋರ್‌ನ ಯು. ಬಿ ಚಕ್ರಪಾಣಿ, ಯೋಜನಾಧಿಕಾರಿ ದಿನೇಶ್, ಶಿಬಿರಾಧಿಕಾರಿ ಧನಂಜಯ ಅಗೋಳಿಕಜೆ, ಜಿಲ್ಲಾ ಉಪಾಧ್ಯಕ್ಷರು, ಜನಜಾಗೃತಿ ಸಮಿತಿಯವರು ಉಪಸ್ಥಿತರಿದ್ದರು.


ಶಿಬಿರದ ಉದ್ಘಾಟನೆಯ ನಂತರ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಮತ್ತು ನೋಂದಾವಣೆ ಕಾರ್ಯ ನಡೆಯಿತು. ನಂತರ ಕೌಟುಂಬಿಕ ಸಲಹೆ, ಗಣ್ಯರ ಮಾಹಿತಿ ಮಾರ್ಗದರ್ಶನ, ಸಾಂಸ್ಕ್ರೀಟಿಕ ಕಾರ್ಯಕ್ರಮ, ಭಜನೆ ನಂತರ ಶಿಬಿರಾರ್ಥಿಗಳಿಗೆ ಚಟುವಟಿಕೆಗಳು ನಡೆಯಲಿದೆ.