ಅಮರ ತರಂಗ ನಾಟಕ ಸಂಘದ ಪದಗ್ರಹಣ, ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ, ಚರಿತ್ರೆ ಸುಳ್ಳಾಗಲು ಸಾಧ್ಯವಿಲ್ಲ. ನಾಟಕದಲ್ಲಿ ಸುಳ್ಳನ್ನು ಹೇಳಲು ಸಾಧ್ಯವಿಲ್ಲ : ತುಕಾರಾಂ ಏನೆಕಲ್ಲು

0

ಅಮರ ತರಂಗ ನಾಟಕ ಸಂಘದ ಪದಗ್ರಹಣ, ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ನ.20 ರಂದು 
ಯುವಜನ ಸಂಯುಕ್ತ ಮಂಡಳಿಯಲ್ಲಿ  ನಡೆಯಿತು.


ಕಾರ್ಯಕ್ರಮವನ್ನು  ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ನಟ ಮತ್ತು  ರಂಗ ನಿರ್ದೇಶಕರ,  ತುಕಾರಾಮ ಯೇನೆಕಲ್ಲು ಉದ್ಘಾಟಿಸಿದರು. ಅಮರ  ತರಂಗದ ಅಧ್ಯಕ್ಷ  ತೇಜಕುಮಾರ್ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ   ಒಕ್ಕಲಿಗರ ವಾಯ್ಸ್ , ಬೆಂಗಳೂರು ಇದರ ಸಂಪಾದಕ  ಎಸ್.ನಾಗಭೂಷಣ್,  ಕೆ.ಪಿ.ಸಿ.ಸಿ ಸದಸ್ಯ ಹಾಗೂ ಉದ್ಯಮಿ  ನಂದಕುಮಾರ್  ಎಚ್.ಎಂ ಉಪಸ್ಥಿತರಿದ್ದರು.
ಆಹಾರ ಸರಬರಾಜು ಇಲಾಖೆಯ  ಪಡಿತರ ವ್ಯವಸ್ಥೆಯ ಜನಜಾಗೃತಿ ಸಮಿತಿಯ ಜಿಲ್ಲಾ ಸದಸ್ಯರರಾದ ರಾಧಾಕೃಷ್ಣ ಬೊಳ್ಳೂರು ಅಮರ ತರಂಗ ಲಾಂಛನ ಬಿಡುಗಡೆ ಮಾಡಿದರು.


ಎ.ಕೆ .ಹಿಮಕರ್ ಅವರು ಬರೆದ ನಾಟಕ ‘ಅಮರ ಸಮರ ನಾಯಕ- ಕೆದಂಬಾಡಿ ರಾಮಯ್ಯ ಗೌಡ’
ಕೃತಿಯನ್ನು  ಆಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷ  ಡಾ। ಕೆ.ವಿ.ಚಿದಾನಂದ ಲೋಕಾರ್ಪಣೆ ಮಾಡಿದರು.
ವಿದ್ಯಾಧರ ಕುಡೆಕಲ್ಲು ಬರೆದ ಇತಿಹಾಸ ಕೃತಿ, ‘ಅಮರ ಸುಳ್ಯ – 1837’ ಇದರ  ದ್ವಿತೀಯ ಆವೃತ್ತಿಯನ್ನು ನಾಗಭೂಷಣ್  ಲೋಕಾರ್ಪಣೆಯನ್ನುಮಾಡಿದರು.

  ವಿದ್ಯಾಧರ ಕುಡೆಕಲ್ಲು ವೇದಿಕೆಯಲ್ಲಿದ್ದರು.  ಎ.ಕೆ. ಹಿಮಕರ ಪ್ರಸ್ತಾವಿಕವಾಗಿ ಮಾತನಾಡಿದರು.  ಸಂಜೀವ ಕುದ್ಪಾಜೆ ವಂದಿಸಿದರು.  ನಾರಾಯಣ ಶೇಡಿಕಜೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ “ಅಮರ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ” ನಾಟಕ ಪ್ರದರ್ಶನ  ನಡೆಯಿತು.

185 ವರ್ಷ ನಂತರ “ಅಮರ” ಶಬ್ದ ತರಂಗ ತರಂಗಾಂತರ ವಾಗಿ ಹೊರ ಹೊಮ್ಮುತಿದೆ : ತೇಜಕುಮಾರ್ ಕುಡೆಕಲ್ಲು

ಹಿಂದಿನ ಕಾಲದಲ್ಲಿ ಕೊಡಗು ರಾಜರ ಆಡಳಿತಕ್ಕೆ ಸುಳ್ಯ ಒಳಪಟ್ಟಿತು. ಗೌಡ ಜನಾಂಗದ ದಿಟ್ಟ ಹೋರಾಟದಿಂದ ಸುಳ್ಯದಿಂದ    ಬ್ರಿಟೀಷರು   ಬೇಗ ತೆರಳಿದರು : ನಂದಕುಮಾರ್

ತಂದೆ ಒಂದು ಕಡೆ,  ತಾಯಿ ಒಂದು ಕಡೆ ಮೊಬೈಲ್ ನಲ್ಲಿ. ಮಕ್ಕಳೂ ಮೊಬೈಲ್ ನೋಡುತಿರುತ್ತವೆ. ಈ ಕಾಲದಲ್ಲೂ ಹಿಮಕರ್ ತಂಡ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡ  ಬಗ್ಗೆ ಕೃತಿ ಬರೆದಿದ್ದಾರೆ ಅಭಿನಂದನಾರ್ಹ :  ನಾಗ ಭೂಷಣ್

ಕೆದಂಬಾಡಿ ರಾಮಯ್ಯ ಗೌಡರ ವಿಚಾರ ಬಂದ ನಂತರ ಸುಳ್ಯದ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಹೆಚ್ಚು ಜನರಿಗೆ ಗೊತ್ತಾಗುವಂತಾಯಿತು. ಮುಂದಿನ ದಿನಗಳಲ್ಲಿ ಕನಿಷ್ಟ ಸಮಯದ ರಾಮಯ್ಯ ಗೌಡರ  ನಾಟಕ ಪ್ರಾಥಮಿಕ ಶಾಲೆಯಲ್ಲೂ  ಆಗುವಂತಾಗಲಿ. : ಕೆ.ವಿ ಚಿದಾನಂದ

ಸುಳ್ಯದಲ್ಲಿ  ಕುರುಂಜಿಯವರು ಮಾಡಿದ ಶಿಕ್ಷಣ ಸಂಗತಿ ದೇಶಕ್ಕೆ ಪಸರಿಸಿದೆ. ಮುಂದೆ ಕುರುಂಜಿಯವರು ಸದಾ ಇತಿಹಾಸ ಪುಟದಲ್ಲಿ ಇರಲಿದ್ದಾರೆ : ರಾಧಾಕೃಷ್ಣ ಬೊಳ್ಳೂರು

ಸುಳ್ಯದಲ್ಲಿ ಅಮರ ಕ್ರಾಂತಿ ಬಗ್ಗೆ 7 ಪುಸ್ತಕ ಬಂದಿದೆ. ಇನ್ನು ಬರಲಿಕ್ಕಿಲ್ಲ ಅನಿಸುತ್ತದೆ:  ಎ.ಕೆ ಹಿಮಕರ

ಚರಿತ್ರೆ ಸುಳ್ಳಾಗಲು ಸಾದ್ಯವಿಲ್ಲ. ರಾಮಯ್ಯ ಗೌಡರ ಪ್ರತಿಮೆ ಇದು ಸುಳ್ಯಕ್ಕೆ ಹೆಮ್ಮೆ. ನಾಟಕದಲ್ಲಿ ಸುಳ್ಳನ್ನು ಹೇಳಲು ಸಾದ್ಯವಿಲ್ಲ : ತುಕಾರಾಮ ಏನೆಕಲ್ಲು