ಮುಕ್ಕೂರು ‌: ಮೊಗೇರ ಸ್ವಜಾತಿ ಬಾಂಧವರ ಅಂತರ್ ರಾಜ್ಯಮಟ್ಟದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪೆರುವಾಜೆ -ಮುಕ್ಕೂರು ಮೊಗೇರ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಡಿ.18 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿರುವ 7ನೇ ವರ್ಷದ ಮೊಗೇರ ಸ್ವಜಾತಿ ಬಾಂಧವರ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟ, ಸಭಾ ಕಾರ್ಯಕ್ರಮ ಮತ್ತು ಸಮ್ಮಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.19 ರಂದು ಕಾನಾವು ಕುವೆತ್ತಡ್ಕದಲ್ಲಿ ನಡೆಯಿತು.


ಪೆರುವಾಜೆ-ಮುಕ್ಕೂರು ಮೊಗೇರ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಕಾನಾವು ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದ್ದು ಈ ಬಾರಿಯು ಯಶಸ್ವಿಯಾಗಿ ಅನುಷ್ಟಾನಕ್ಕೆ ಸಿದ್ಧತೆ ನಡೆದಿದೆ. ದ.ಕ.ಜಿಲ್ಲೆ, ಕಾಸರಗೋಡು ಸಹಿತ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಷೆಯ ಕುರಿತು ವಿವರಿಸಿದರು.

ಸಭಾ ಕಾರ್ಯಕ್ರಮ, ಸಮ್ಮಾನ ಸಮಾರಂಭ ನಡೆಯಲಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಪುರುಷರ ವಿಭಾಗದಲ್ಲಿ ಗ್ರಿಪ್ ಮಾದರಿಯ ಹಗ್ಗಜಗ್ಗಾಟ, ವಾಲಿಬಾಲ್, ಮಹಿಳೆಯರ ವಿಭಾಗದಲ್ಲಿ ಲೆವೆಲ್ ಮಾದರಿ ಹಗ್ಗಜಗ್ಗಾಟ, ತ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಈ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಇದರ ಉಚಿತ ನೋಂದಣಿ ನಡೆಯಲಿದೆ ಎಂದರು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೃಷ್ಣಪ್ಪ ಜರಿಯಡ್ಕ, ಗೌರವ ಸಲಹೆಗಾರ ಪೂವಪ್ಪ ಅನವುಗುಂಡಿ, ಕೋಶಾಧಿಕಾರಿ ತಿಮ್ಮಪ್ಪ ಚೆನ್ನಾವರ, ಮೋನಪ್ಪ ಜರಿಯಡ್ಕ, ಮಾಧವ ಕುವೆತ್ತಡ್ಕ, ಮಾಜಿ ಅಧ್ಯಕ್ಷ ಪುರುಷೋತ್ತಮ ಕುಂಡಡ್ಕ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೋಳಕುಮೇರು, ರವೀಂದ್ರ ಅನವುಗುಂಡಿ, ಉಪಾಧ್ಯಕ್ಷ ಶೀನ ಅನವುಗುಂಡಿ, ರವಿ ಕುವೆತ್ತಡ್ಕ, ಬಾಬು ಕುವೆತ್ತಡ್ಕ ಮೊದಲಾದವರಿದ್ದರು.