ಪೆರುವಾಜೆಯಿಂದ ಕೇರ್ಪಡ ದೇವಸ್ಥಾನಕ್ಕೆ ಉತ್ಸವಮೂರ್ತಿ ಆಗಮನ-ವೈದಿಕ ಕಾರ್ಯಕ್ರಮ

0

ಪೆರುವಾಜೆ ಶ್ರೀ ಜಲದುರ್ಗ ದೇವಸ್ಥಾನದಲ್ಲಿದ್ದ ಉತ್ಸವ ಮೂರ್ತಿಯನ್ನು ನ. 28 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಮಹಾಪೂಜೆಯ ಬಳಿಕ ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಶೋಭಾ ಯಾತ್ರೆ ಮೂಲಕ ತರಲಾಯಿತು.
ಕೇರ್ಪಡ ದೇವಸ್ಥಾನಕ್ಕೆ ಸಂಬಂಧಪಟ್ಟ ನಿಂತಿ ಕಲ್ಲು ಶ್ರೀವನದುರ್ಗ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಿ, ಮಹಾ ಪೂಜೆಯ ಬಳಿಕ ಶೋಭಾ ಯಾತ್ರೆಯು ನಿಂತಿಕಲ್ಲಿನಿಂದ ಕೇರ್ಪಡೆ ದೇವಸ್ಥಾನ ತಲುಪಿದ ಬಳಿಕ ತಂತ್ರಿಗಳ ಮುಖೇನ ಉತ್ಸವ ಮೂರ್ತಿಯನ್ನು ಸ್ವೀಕರಿಸಿ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕದ ಬಳಿಕ ಪ್ರಸಾದ ವಿತರಣೆ ನಡೆಯಿತು.


ಪೆರುವಾಜೆ ಇರುವಜೆ ಶ್ರೀ ಜಲದುರ್ಗ ದೇವಸ್ಥಾನದ ಸಮಿತಿಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮತ್ತು ಸದಸ್ಯರುಗಳು, ಕೇರ್ಪಡ ದೇವಳದ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು ಮತ್ತು ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ, ನಾಗೇಶ್ ಆಳ್ವ, ರಘುನಾಥ ಎಂಜೀರು, ಮಾಜಿ ಅಧ್ಯಕ್ಷ ಪಿಜಾವು ಬೀಡು ಜಗನ್ನಾಥ ರೈ, ಮಾಜಿ ಸದಸ್ಯರಾದ ಪದ್ಮನಾಭ ರೈ ಎಂಜಿರು, ನವೀನ್ ಕುಮಾರ್ ಬೊಳ್ಕಜೆ, ಭಾಗೀರಥ ಮುರುಳ್ಯ, ಗಣ್ಯರು, ಸಮಿತಿ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.