ಮಡಪ್ಪಾಡಿ : ಲಘು ಭೂಕಂಪನ

0

ಮಡಪ್ಪಾಡಿಯಲ್ಲಿ ಇಂದು‌ ಸಂಜೆ ಲಘು ಭೂಕಂಪನವಾಗಿರುವುದಾಗಿ ತಿಳಿದು ಬಂದಿದೆ.
ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ಮಡಪ್ಪಾಡಿ ಪೇಟೆಯಲ್ಲಿಯೂ ಈ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ‌. 7.32 ರ ಸಮಯದಲ್ಲಿ ದೊಡ್ಡ ಸದ್ದು ಕೇಳಿಸಿತು. ಮನೆಯ ಒಳಗಡೆ ವೈಬ್ರೇಷನ್ ಆದ ಅನುಭವವಾಯಿತು ಎಂದು ಉಪೇಂದ್ರ ಕಡ್ಯ ಸುದ್ದಿಗೆ ತಿಳಿಸಿದ್ದಾರೆ.