ಡಿ.9 ರಂದು ಸುಳ್ಯ ನಗರದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ : ಗುದ್ದಲಿಪೂಜೆ, ಆಮಂತ್ರಣದಲ್ಲಿ ಶಿಷ್ಟಾಚಾರ ಪಾಲಿಸಿಲ್ಲವೆಂದು ವಿಪಕ್ಷ ಅಸಮಾಧಾನ, 65 ಕೋಟಿ ರೂ ಅನುದಾನ ಬರಲಿದೆ.‌ ಆಗ ಅದ್ದೂರಿ ಕಾರ್ಯಕ್ರಮ : ಅಧ್ಯಕ್ಷರ ವಿಶ್ವಾಸ

0

ಡಿ.9 ರಂದು‌ ಸುಳ್ಯ‌ ನಗರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ನಡೆಯಲಿದ್ದು ಆಮಂತ್ರಣದಲ್ಲಿ ಶಿಷ್ಟಾಚಾರ ಪಾಲಿಸಿಲ್ಲವೆಂದು ವಿಪಕ್ಷ ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಡೆದಿದೆ.

ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಸದಸ್ಯರುಗಳಾದ ಡೇವಿಡ್ ಧೀರಾ ಕ್ರಾಸ್ತ, ಎಂ.ವೆಂಕಪ್ಪ ಗೌಡ, ಉಮ್ಮರ್ ಕೆ.ಎಸ್., ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಪೂಜಿತಾ ಕೆ.ಯು., ನಾರಾಯಣ ಶಾಂತಿನಗರ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ ದುಗಲಡ್ಕ, ಬುದ್ಧ ಜಿ ನಾಯ್ಕ,ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ನಾಮನಿರ್ದೇಶನ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ, ಯತೀಶ್‌ ಬೀರಮಂಗಲ ಇದ್ದರು.

ಆಮಂತ್ರಣ ದಲ್ಲಿ ಉಸ್ತುವಾರಿ ಸಚಿವರು, ಎಂಎಲ್ ಸಿಗಳನ್ನು ಹಾಕದಿರುವ ಕುರಿತು ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡ ಆಕ್ಷೇಪ ವ್ಯಕ್ತಪಡಿಸಿದರು. ‌

“ನಾವು ಈ ಕುರಿತು ಚರ್ಚಿಸಿದ್ದು ಉಸ್ತುವಾರಿ ಸಚಿವರು, ಎಂಎಲ್ ಸಿಗಳನ್ನು ಹಾಕಿದರೆ ಕಾಮಗಾರಿಗೆ ಸಂಬಂಧಿಸಿದ ಇಲಾಖಾ ಸಚಿವರನ್ನು ಕರೆಯಬೇಕು. ತಾಲೂಕು ಮಟ್ಟದಲ್ಲೇ ಸ್ಥಳೀಯ ಶಾಸಕರಿದ್ದೂ ಮಾಡಬಹುದೆಂಬ ಸಲಹೆ ಬಂದುದರಿಂದ, ಸ್ಥಳೀಯ ಶಾಸಕರು, ಸಚಿವರ ಮೂಲಕ ಶಿಲಾನ್ಯಾಸ ನಡೆಯುವುದು” ಎಂದು‌ ಹೇಳಿದರು.
ವೆಂಕಪ್ಪ ಗೌಡರು ತಮ್ಮ ವಾದ‌ ಮತ್ತೆ ಮುಂದುವರಿಸಿದಾಗ, ನಾವು ತಾಲೂಕಿನವರನ್ನು ಹೊರತು ಪಡಿಸಿ ಉಳಿದ ಯಾರನ್ನೂ ಆಮಂತ್ರಣದಲ್ಲಿ ಹಾಕಿಲ್ಲ. ಆದ್ದರಿಂದ ಇದರಲ್ಲಿ ಗೊಂದಲ ಬೇಡ ಎಂದು ಅಧ್ಯಕ್ಷರು ಹೇಳಿದಾಗ, ನೀವು ಹೇಳುತ್ತೀರಿ ಅಧ್ಯಕ್ಷರೇ, ಮುಂದೆ ಇದು ಅಧಿಕಾರಿಗಳಿಗೆ ಸಮಸ್ಯೆ ಆಗೋದು ಎಂದು ವೆಂಕಪ್ಪ ಗೌಡರು ಹೇಳಿದರು. ಶಿಷ್ಟಾಚಾರ ಆಗಬೇಕಿತ್ತು. ಆದರೆ ತಾಲೂಕಿನವರನ್ನು ಹಾಕಿ ಕಾರ್ಯಕ್ರಮ ಮಾಡಲಾಗುತ್ತಿದೆ. ನಿಮ್ಮ ಸಲಹೆಯನ್ನು ನಾವು ಸ್ವೀಕಾರ ಮಾಡುತ್ತೇನೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳೋಣ” ಎಂದು ಮುಖ್ಯಾಧಿಕಾರಿ ಹೇಳಿದರು.
ಈ ಕುರಿತು ಚರ್ಚೆ ನಡೆಯಿತು. ಬೂಡು ರಾಧಾಕೃಷ್ಣ ರೈಯವರು ಈಗ ಕಾರ್ಯಕ್ರಮ ಯಶಸ್ಸಿನ ಕುರಿತು ಸಹಕಾರ ನೀಡೋಣ ಎಂದು ಹೇಳಿದಾಗ, ಸದಸ್ಯ ಕೆ.ಎಸ್. ಉಮ್ಮರ್ ರವರು ಕೂಡಾ ಸಹಕಾರದ ಮಾತನ್ನಾಡಿದರು.

“ಮುಂದಿನ ದಿನದಲ್ಲಿ ರೂ.65 ಕೋಟಿ ಅನುದಾನ ಬರಲಿದ್ದು, ಅದರ ಅದ್ದೂರಿ‌ ಕಾರ್ಯಕ್ರಮ ಮಾಡೋಣ” ಎಂದು ಹೇಳಿದರು.