ಮುರುಳ್ಯ – ಎಣ್ಮೂರು ಸಹಕಾರಿ ಸಂಘದ ನೂತನ ಕಟ್ಟಡ ಸಾಧನಾ ಸಹಕಾರ ಸೌಧ ಲೋಕಾರ್ಪಣೆ, ಸಹಕಾರಿ ಸಂಘಗಳು ಉದ್ಧೇಶ ಹಾಗೂ ವಿಚಾರಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಿವೆ: ಸಚಿವ ಎಸ್. ಅಂಗಾರ ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಹಾಗೂ ನಿತ್ಯಾನಂದ ಮುಂಡೋಡಿ ಅವರಿಗೆ ಗೌರವ ಸನ್ಮಾನ

0


ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಸಹಕಾರಿ ಸಂಘಗಳು ಜನರಿಗೆ ಉತ್ತಮ ಸೇವೆ ಹಾಗೂ ಸಾಲ ಸೌಲಭ್ಯಗಳನ್ನು ನೀಡುವ ಉತ್ತಮ ಉದ್ದೇಶ ಹಾಗೂ ವಿಚಾರಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಿವೆ. ನಿಂತಿಕಲ್ಲು ಬೆಳೆಯುತ್ತಿರುವ ಪಟ್ಟಣ. ಇಂತಹ ಸ್ಥಳದಲ್ಲಿ ಸಹಕಾರಿ ಸಂಘಗಳು ಜನರಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಹೇಳಿದರು.

ಅವರು ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ನಿಂತಿಕಲ್ಲು ಇದರ ನೂತನ ಕಟ್ಟಡ ‘ಸಾಧನಾ ಸಹಕಾರ ಸೌಧ’ ವನ್ನು ಲೋಕಾರ್ಪಣೆಗೊಳಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ನಿಂತಿಕಲ್ಲು ಇದರ ನೂತನ ಕಟ್ಟಡ ಸಾಧನಾ ಸಹಕಾರ ಸೌಧದ ಲೋಕಾರ್ಪಣೆ ಸಮಾರಂಭವು ಡಿ.10ರಂದು ಜರುಗಿತು.


ಮುರುಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಕು. ಜಾ‌ನಕಿ ಮುರುಳ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಸಹಕಾರ ಸಂಘದ ಆಡಳಿತ ಕಛೇರಿಯನ್ನು ದ.ಕ. ಜಿಲ್ಲಾ ಕೇಂದ್ರ ಸ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಸಹಕಾರರತ್ನ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಸವಣೂರು ಉದ್ಘಾಟಿಸಿದರು. ವಸತಿ ಸಮುಚ್ಚಯವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ಲೋಕಾರ್ಪಣೆಗೊಳಿಸಿದರು. ವಾಣಿಜ್ಯ ಸಂಕೀರ್ಣವನ್ನು ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿದರು. ಸಹಕಾರ ಸಭಾಭವನವನ್ನು ಸಹಕಾರ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಉದ್ಘಾಟಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ವಸಂತ ಗೌಡ ಹುದೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಗೌರವ ಸನ್ಮಾನ
ಈ ಸಂದರ್ಭದಲ್ಲಿ ಸಹಕಾರರತ್ನ ಪ್ರಶಸ್ತಿ ಪುರಸ್ಕೃತರುಗಳಾದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಹಾಗೂ ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದ.ಕ. ಜಿಲ್ಲಾ ಕೇಂದ್ರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಿದರು.

ವೇದಿಕೆಯಲ್ಲಿ ರಾಜ್ಯ ಮೀನುಗಾರಿಕಾ ನಿಗಮದ
ಎ.ವಿ. ತೀರ್ಥರಾಮ, ಎಡಮಂಗಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಪ್ರವೀಣ್, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್., ಅಧ್ಯಕ್ಷ ವಸಂತ ಗೌಡ ಹುದೇರಿ, ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಕೆ.ಜಿ., ನಿರ್ದೇಶಕರುಗಳಾದ ರಘುನಾಥ ರೈ ಕಟ್ಟಬೀಡು, ವಸಂತ ನಡುಬೈಲು, ರೂಪರಾಜ ರೈ ಕೆ. ಕು. ಭಾಗೀರಥಿ ಮುರುಳ್ಯ, ಶೇಖರ ಸಾಲ್ಯಾನ್, ರಾಜಶೇಖರ ಶೃಂಗೇರಿ, ದಿನೇಶ್ ಹೆಚ್., ದಿನೇಶ ಎ, ಪುರುಷೋತ್ತಮ ಆಚಾರ್ಯ ಕೆ., ಶ್ರೀಮತಿ ನಳಿನಿ ಸೀತಾರಾಮ ರೈ ಯು, ದ.ಕ. ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಪ್ರದೀಪ್ ಕೆ., ಸಹಕಾರಿ ಸಂಘದ ಮಾಜಿ ನಿರ್ದೇಶಕ ರಮೇಶ್ ಕೋಟೆ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಕೆ. ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಸಹಕಾರರತ್ನ ಸೀತಾರಾಮ ರೈ ಅವರು ಮಾತನಾಡಿ, 45 ವರ್ಷಗಳ ಹಿಂದೆ ಮುರುಳ್ಯ-ಎಣ್ಮೂರು ಸಹಕಾರಿ ಸಂಘದಲ್ಲಿ ದುಡಿದ ಅನುಭವ ಹಾಗೂ ಆಗಿ‌ನ ಕಾಲದ ಸಾಲ ಸೌಲಭ್ಯಗಳ ಕುರಿತು ನೆನಪು ಹಂಚಿಕೊಂಡರು.
ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಅಭಿವೃದ್ಧಿಯಾಗಲು ಸಹಕಾರಿ ಸಂಘಗಳು ಪ್ರಮುಖ ಕಾರಣವಾಗಿದ್ದು,
ಕೃಷಿ ಪತ್ತಿನ ಸಹಕಾರಿ ಸಂಘಗಳು ಜನರ ಜೀವನಕ್ಕೆ ಸಹಕಾರಿಯಾಗಿದೆ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಚಿವರು ಮುರುಳ್ಯ – ಎಣ್ಮೂರು ಸಹಕಾರಿ ಸಂಘದ 2023ನೇ ಸಾಲಿನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.