ಸಚಿವ ಎಸ್ ಅಂಗಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ

0

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್ ಬೈಲ್ ಇಲ್ಲಿಗೆ ಸಚಿವರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಎಸ್ ಅಂಗಾರ ಅವರು ಭೇಟಿ ನೀಡಿ ಕಾಲೇಜು ಅಭಿವೃದ್ಧಿ ಸಮಿತಿ ಯ ಸಭೆಯಲ್ಲಿ ಭಾಗವಹಿಸಿ ಕಾಲೇಜಿನ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಿದರು. ಡಿಸೆಂಬರ್ 20ರಂದು ಕಾಲೇಜಿಗೆ ನ್ಯಾಕ್ ಮೌಲ್ಯಾಂಕನ ತಂಡ ಭೇಟಿ ನೀಡಲಿದ್ದು ಈ ತಂಡವನ್ನು ಬರಮಾಡುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು ಕಾಲೇಜಿನ ಅಭಿವೃದ್ಧಿ ಕುರಿತಾದ ಕೆಲವೊಂದು ವಿಷಯಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಗಳಾದ ಜಗದೀಶ ಸರಳಿಕುಂಜ, ಪುರುಷೋತ್ತಮ ಕಿರ್ಲಾಯ, ಜಿ.ಜಿ ನಾಯಕ್, ಮಾಧವ ಗೌಡ ಮಡಪ್ಪಾಡಿ, ವಿನಯ ಕುಮಾರ್ ಕಂದಡ್ಕ, ನಾರಾಯಣ ರಾವ್ ಅನ್ನಪೂರ್ಣ, ವಸಂತ ಬೀರಮಂಗಲ, ಚಂದ್ರಶೇಖರ ಸೆಂಚೂರಿ, ಐ.ಬಿ ಚಂದ್ರಶೇಖರ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.