ಕೃಷಿ ಮೇಳದಲ್ಲಿ ವಿಚಾರಗೋಷ್ಠಿ ಆರಂಭ, ಅಡಿಕೆಯೊಂದಿಗೆ ಬಹುಬೆಳೆ ಪದ್ದತಿ ಅಳವಡಿಸಿದರೆ ಲಾಭದಾಯಕ

0

ಅಡಿಕೆ ಕೃಷಿಯೊಂದಿಗೆ ಬಹುಬೆಳೆ ಪದ್ಧತಿ ಅಳವಡಿಸಿದರೆ ಕೃಷಿ ಲಾಭದಾಯಕವಾಗುತ್ತದೆ ಎಂದು ಸಿಪಿಸಿಆರ್ ಐ ವಿಜ್ಞಾನಿ ಡಾ.ನಾಗರಾಜ್ ಹೇಳಿದರು.

ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಇಂದಿನಿಂದ ಆರಂಭಗೊಂಡ ಕೃಷಿ ಮೇಳದಲ್ಲಿ ತೋಟಗಾರಿಕೆ ಕೃಷಿ, ರೋಗಗಳು, ಪರಿಹಾರ, ಬೆಳೆವಿಮೆ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಸುಳ್ಯ ತಾಲೂಕಿನ ಹೆಚ್ಚಿನ ಭಾಗದಲ್ಲಿ ಅಡಿಕೆ ಎಲೆ ಹಳದಿ ರೋಗ ವ್ಯಾಪಕವಾಗಿದೆ. ಅದರ ಕುರಿತು ಸಂಶೋಧನೆಗಳು ನಡೆಯುತ್ತಿದೆಯಾದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಆದರೆ ಸಂಶೋಧನೆಗಳು ನಿಂತಿಲ್ಲ. ಈಗಲೂ ನಡೆಯುತ್ತಿದೆ. ಹಳದಿ ರೋಗದ ಕೆಲವು ತೋಟದಲ್ಲಿ ಫಸಲು ಬಂದಿರುವ ಉದಾಹರಣೆ ಯೂ ಇದೆ ಎಂದ ಅವರು ಎಲೆ‌ಚುಕ್ಕೆ ರೋಗ, ತೋಟಗಳಿಗೆ ಗೊಬ್ಬರ ನೀಡುವ ಕುರಿತಾಗಿ ವಿವರ ನೀಡಿದರು.
ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜಾ ಬೆಳೆ ವಿಮೆ ಕುರಿತು ವಿಷಯ ಮಂಡಿಸಿದರು.

ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಅಧ್ಯಕ್ಷತೆ ವಹಿಸಿದ್ದರು.

ಕೃಷಿಕರಾದ ಅಶೋಕ್ ಪ್ರಭು, ಪ್ರಣವ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಶಾಂತ ಪೈ ವೇದಿಕೆಯಲ್ಲಿದ್ದರು.

ಮಧುರಾ ಎಂ.ಆರ್.‌ ಸ್ವಾಗತಿಸಿ, ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು.