ಆಲೆಟ್ಟಿ- ಬಡ್ಡಡ್ಕ- ಕೂರ್ನಡ್ಕ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ, ಸಚಿವ ಎಸ್. ಅಂಗಾರ ರಿಂದ ಹೆಚ್ಚುವರಿ ರೂ. 1 ಕೋಟಿ ಅನುದಾನ

0

ಆಲೆಟ್ಟಿ- ಬಡ್ಡಡ್ಕ- ಕೂರ್ನಡ್ಕ ರಸ್ತೆ ಡಾಮರೀಕರಣದ ಕಾಮಗಾರಿ ಕೆಲಸಕ್ಕೆ ಗುದ್ದಲಿ ಪೂಜೆಯನ್ನು ಬಡ್ಡಡ್ಕದಲ್ಲಿ ನೆರವೇರಿಸಲಾಯಿತು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ ರವರು ಗುದ್ದಲಿ ಪೂಜೆ ನೆರವೇರಿಸಿದರು. ಹಿರಿಯರಾದ ನಿವೃತ್ತ ಶಿಕ್ಷಕ ರಾಮಕೃಷ್ಣ ಕಡಂಬಳಿತ್ತಾಯ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಪಂಚಾಯತ್ ಸದಸ್ಯರಾದ ಶಿವಾನಂದ ರಂಗತ್ತಮಲೆ, ಕಮಲ ನಾಗಪಟ್ಟಣ, ಭಾಗೀರಥಿ ಪತ್ತುಕುಂಜ, ಶಶಿಕಲಾ ನಾಯಕ್ ದೋಣಿಮೂಲೆ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ, ಮುಖಂಡರಾದ ಬಾಲಚಂದ್ರ ಪಿ.ಕೆ, ಪುಂಡರೀಕ ಕಾಪುಮಲೆ, ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಪಂ.ಮಾಜಿ ಅಧ್ಯಕ್ಷ ಹರೀಶ್ ರಂಗತ್ತಮಲೆ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ಯುವ ಮೋರ್ಚಾ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಕೊಲ್ಲರಮೂಲೆ, ಭವಾನಿಶಂಕರ ಬಾಟೋಳಿ, ಸುಧಾಕರ ಬಾಟೋಳಿ, ಎನ್.ಎ.ಜಯರಾಮ, ಗಂಗಾಧರ ಬಡ್ಡಡ್ಕ, ರಮೇಶ್ ಪತ್ತುಕುಂಜ, ಶಿವರಾಮ ಕಾಪು ಮಲೆ, ಗಿರಿಯಪ್ಪ ನಾಯ್ಕ್ ಎಲಿಕ್ಕಳ, ವೆಂಕಟ್ರಮಣ ದೋಣಿಮೂಲೆ, ಜನಾರ್ದನ ಕಲ್ಲಪಳ್ಳಿ,ಗಂಗಾಧರ ಪತ್ತುಕುಂಜ, ಕಮಲಾಕ್ಷ ಬಡ್ಡಡ್ಕ ಹಾಗೂ ಸ್ಥಳೀಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಬಗ್ಗೆ ಎ.ವಿ.ತೀರ್ಥರಾಮ ರವರು ಮಾತನಾಡಿ ಆಲೆಟ್ಟಿ ಗ್ರಾಮಕ್ಕೆ ಶಾಸಕ ಅಂಗಾರರವರು ಕೊಡುಗೆ ಸಾಕಷ್ಟಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಈ ಭಾಗದಲ್ಲಿ ನಡೆಯುತ್ತಿದೆ.
ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಯವರು ಮಾತನಾಡಿ ಈ ರಸ್ತೆ ಕಾಮಗಾರಿಗೆ
ಈಗಾಗಲೇ 1 ಕೋಟಿ ಅನುದಾನ ಹೆಚ್ಚುವರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅನುದಾನದ ಅವಶ್ಯಕತೆ ಬಂದಲ್ಲಿ ಮತ್ತೆ ಹೆಚ್ಚಿನ ಅನುದಾನ ನೀಡುವ ಭರವಸೆ ಸಚಿವರು ನೀಡಿದ್ದಾರೆ. ಕಾಮಗಾರಿ ಕೆಲಸ ಮಾಡುವ ಸಂದರ್ಭ ನಾಗರಿಕರು ಜವಬ್ದಾರಿ ಯಿಂದ ಮುತುವರ್ಜಿ ವಹಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು.