ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಬಂಜೆತನ ನಿವಾರಣೆ ತಪಾಸಣಾ ಶಿಬಿರ

0

ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಹಾಗೂ ಮಂಗಳೂರು ಎ ಆರ್ ಎಂ ಸಿ ಐ ವಿ ಎಫ್ ಸಂಸ್ಥೆ ವತಿಯಿಂದ ಉಚಿತ ಬಂಜೆತನ ನಿವಾರಣೆ ತಪಾಸಣಾ ಶಿಬಿರ ಡಿಸೆಂಬರ್ 18ರಂದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಡೆಯಿತು.


ಶಿಬಿರದಲ್ಲಿ 100 ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಸಂಸ್ಥೆಯ ಮುಖ್ಯ ವೈದ್ಯರಾದ ಗೌರವ್ ಗುಜರಾತಿ ಈ ಸಂದರ್ಭದಲ್ಲಿ ಮಾತನಾಡಿ ಬಂಜೆತನ ಎಂಬುವುದು ಶಮನವಾಗದಂತ ಸಮಸ್ಯೆ ಅಲ್ಲ. ಸೂಕ್ತ ಸಮಯದಲ್ಲಿ ಸಂಬಂಧಪಟ್ಟ ವೈದ್ಯರಿಂದ ಈ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದು ಬಂಜೆತನವನ್ನು ನಿವಾರಿಸಿಕೊಳ್ಳಬಹುದು.
ಈ ದೃಷ್ಟಿಯಿಂದ ನಮ್ಮ ಸಂಸ್ಥೆಯು ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಸಂಘಟನೆಗಳ ಮತ್ತು ಆರೋಗ್ಯ ಕೇಂದ್ರಗಳ ಸಹಯೋಗದಿಂದ ಉಚಿತವಾದ ಶಿಬಿರಗಳನ್ನು ನಡೆಸುತ್ತಿದ್ದು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.
ನಮ್ಮ ಸಂಸ್ಥೆಯು ಮಂಗಳೂರಿನಲ್ಲಿ ಕಾರ್ಯಚಡಿಸುತ್ತಿದ್ದು ಯಾವುದೇ ಸಂದರ್ಭಗಳಲ್ಲಿ ನಮ್ಮ ವೈದ್ಯರುಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪಿ ಆರ್ ಓ ಅಬೂಬಕ್ಕರ್ ಸಿದ್ದೀಕ್ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಕೆಲವು ಭಾಗಗಳ ವ್ಯಾಪ್ತಿಯ ಸಂಸ್ಥೆಯ ಪಬ್ಲಿಕ್ ರಿಲೇಶನ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಈ ಭಾಗದ ಯಾವುದೇ ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು, ಸಂಸ್ಥೆಗಳು ಈ ರೀತಿಯ ಶಿಬಿರವನ್ನು ಆಯೋಜಿಸಬೇಕಾದಲ್ಲಿ ಉಚಿತವಾಗಿ ಮಾಡಿಕೊಡಲು ಸಂಸ್ಥೆ ಸದಾ ಸಿದ್ಧವಾಗಿದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಸಂಸ್ಥೆಯ ಮ್ಯಾನೇಜರ್ ಅಭಿಲಾಶ್, ಹಾಗೂ ಜಸ್ಮಿತ ಪಿರೇರಾ ಸಹಕರಿಸಿದರು.