ಗುತ್ತಿಗಾರಿನಲ್ಲಿ ವೀರಾಂಜನೇಯ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಕಬಡ್ಡಿ ಪಂದ್ಯಾಟ, ಪುರುಷರು:ವೀರ ಮಾರುತಿ ಗುತ್ತಿಗಾರು ಪ್ರಥಮ, ವಿನಯ ಕ್ಯಾಟರಿಂಗ್ ಉಬರಡ್ಕ ದ್ವಿತೀಯ, ಪ್ರಾಥಮಿಕ ಶಾಲೆ: ಪ್ರಗತಿ ಕಾಣಿಯೂರು, ಕೋಣಾಜೆ ಪ್ರಥಮ, ಪ್ರೌಢಶಾಲೆ: ಮೌಲಾನಾ ಆಜಾದ್ ಪುತ್ತೂರು, ಎಣ್ಮೂರು ಪ್ರಥಮ

0

ವೀರಾಂಜನೇಯ ಸ್ಫೋರ್ಟ್ಸ್ ಕ್ಲಬ್ ವತಿಯಿಂದ, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ಇವರ ಜಂಟಿ ಆಶ್ರಯದಲ್ಲಿ ಎ ಗ್ರೇಡ್ ಪುರುಷರ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಾಟ ಮತ್ತು ಅಭಿನಂದನಾ ಕಾರ್ಯಕ್ರಮ ಡಿ18 ರಂದು ನಡೆದಿದೆ. ಪಂದ್ಯಾಟವು ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ಪುರುಷರ ಕಬ್ಬಡಿಯಲ್ಲಿ ವೀರ ಮಾರುತಿ ಗುತ್ತಿಗಾರು ಪ್ರಥಮ ಸ್ಥಾನ ಪಡೆದಿದ್ದು, ವಿನಯ ಕ್ಯಾಟರಿಂಗ್ ಉಬರಡ್ಕ ದ್ವಿತೀಯ ಸ್ಥಾನ ಪಡೆದಿದೆ, ಆದರ್ಶ ಹಾಲೆಮಜಲು ತೃತೀಯ ಸ್ಥಾನ ಪಡೆದರೆ, ಎಸ್ ಡಿ ಎಮ್ ಉಜಿರೆ ಚತುರ್ಥ ಸ್ಥಾನ ಪಡೆಯಿತು ವಿಜೇತ ತಂಡಗಳು ತಲಾ 30,000 20000, ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳು ತಲಾ 10000 ದಂತೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ಪಡೆದವು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಗತಿ ಕಾಣಿಯೂರು ಪ್ರಥಮ, ಜ್ಞಾನ ದೀಪ ಎಲಿಮಲೆ ದ್ವಿತೀಯ, ಕುಮಾರಸ್ವಾಮಿ ಸುಬ್ರಹ್ಮಣ್ಯ ತೃತೀಯ ಹಾಗೂ ಗುತ್ತಿಗಾರು ಪ್ರಾಥಮಿಕ ಶಾಲೆ ಚತುರ್ಥ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಕೋಣಾಜೆ ಪ್ರಾಥಮಿಕ ಶಾಲೆ ಪ್ರಥಮ, ಗುತ್ತಿಗಾರು ಪ್ರಾಥಮಿಕ ಶಾಲೆ ದ್ವಿತೀಯ, ಲಿಟ್ಲ್ ಪ್ಲವರ್ ದರ್ಬೆ ತೃತೀಯ ಹಾಗೂ ಪ್ರಗತಿ ಕಾಣಿಯೂರು ಚತುರ್ಥ ಸ್ಥಾನ ಪಡೆಯಿತು.

ಪ್ರೌಢಶಾಲಾ ಶಾಲಾ ಬಾಲಕರ ವಿಭಾಗದಲ್ಲಿ ಮೌಲಾನ ಆಜಾದ್ ಪುತ್ತೂರು ಪ್ರಥಮ, ಕೆ.ಪಿ.ಎಸ್ ಬೆಳ್ಳಾರೆ ದ್ವಿತೀಯ, ಜ್ಞಾನ ದೀಪ ಎಲಿಮಲೆ ತೃತೀಯ ಹಾಗೂ ಗುತ್ತಿಗಾರು ಪ್ರೌಢಶಾಲೆ ಶಾಲೆ ಚತುರ್ಥ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಎಣ್ಮೂರು ಪ್ರೌಢಶಾಲೆ ಶಾಲೆ ಪ್ರಥಮ, ಗುತ್ತಿಗಾರು ಪ್ರೌಢಶಾಲೆ ಶಾಲೆ ದ್ವಿತೀಯ, ಕೋಣಾಜೆ ಪ್ರೌಢಶಾಲಾ ತೃತೀಯ ಸ್ಥಾನ ಪಡೆಯಿತು. ಹಾಗೂ ಎಲ್ಲಾ ವಿಜೇತ ತಂಡಗಳಿಗೆ ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.

ಪೂರ್ವಾಹ್ನ ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಪಂದ್ಯಾಟ ಉದ್ಘಾಟಿಸಿದ್ದು, ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ ಧ್ವಜಾರೋಹಣ ಮಾಡಿದರು. ವೀರಾಂಜನೇಯ ಸ್ಫೋರ್ಟ್ ಕ್ಲಬ್ ಗುತ್ತಿಗಾರು ಇದರ ಕಾರ್ಯದರ್ಶಿ ಮೋಹನ್ ದಾಸ್ ಸಭಾಧ್ಯಕ್ಷತೆ ವಹಿಸಿದ್ದರು. ರಾತ್ರಿ ಸಮಾರೋಪ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆದಿದ್ದು ಅಧ್ಯಕ್ಷತೆಯನ್ನು ವೀರಾಂಜನೇಯ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಮಾಯಿಲಪ್ಪ ಕೊಂಬೆಟ್ಟು ವಹಿಸಿದ್ದರು. ಸಭೆಯಲ್ಲಿ
ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಭಾರತಿ ಕೆ.ವಿ ಹಾಗೂ ಯುವಜನ ಸಂಯುಕ್ತ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಶಿವಪ್ರಕಾಶ್ ಕಡಪಳ ಅವರನ್ನು ಅಭಿನಂದಿಸಲಾಗಿದ್ದು ಗುತ್ತಿಗಾರು ಗ್ರಾ.ಪಂ ಸದಸ್ಯ ವೆಂಕಟ್ ವಳಲಂಬೆ ಅವರುಗಳನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ರೇವತಿ ಆಚಳ್ಳಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದ.ಕ ಅಮೆಚೂರು ಕಬಡ್ಡಿ ಅಸೋಸಿಯೇಶನ್ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಕೃಷ್ಣಾನಂದ, ಗುತ್ತಿಗಾರು ಸರಕಾರಿ ಪ್ರೌಢಶಾಲೆ ಇದರ ಮುಖ್ಯೋಪಾಧ್ಯಾಯರಾದ ನೆಲ್ಸನ್‌ ಕ್ಯಾಸ್ಟಲಿನೋ ವೇದಿಕೆಯಲ್ಲಿದ್ದರು. ವೇಣುಕುಮಾರ್ ಚಿಲ್ತಡ್ಕ ಸ್ವಾಗತಿಸಿ, ನಿರಂತ್ ದೇವಸ್ಯ ವಂದಿಸಿದರು. ಸುಕುಮಾರ್ ಕಂದ್ರಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.