ಎ.ವಿ.ತೀರ್ಥರಾಮರವರ ಮನೆಯಲ್ಲಿ ವಾಸ್ತವ್ಯ ಮಾಡಿದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಂದು ಬೆಳಿಗ್ಗೆ ಪಾದ ಪೂಜೆ ನಡೆದು ಸುಬ್ರಹ್ಮಣ್ಯ ಕ್ಕೆ ಪ್ರಯಾಣ

0

ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನಕ್ಕೆ ನಡೆಸುತ್ತಿರುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ| ನಿರ್ಮಲಾನಂದ ಮಹಾಸ್ವಾಮಿಗಳು ನಿನ್ನೆ ಕರ್ನಾಟಕ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮರವರ ಮನೆಯಲ್ಲಿ ವಾಸ್ತವ್ಯ ಮಾಡಿದರು.


ಕೂಜುಗೋಡು, ಮುಂಡೋಡಿ, ಬುಡ್ಲೆಗುತ್ತು ಮತ್ತು ಎಲಿಮಲೆಯಲ್ಲಿ ಪಾದಪೂಜೆ ಸ್ವೀಕರಿಸಿದ ಸ್ವಾಮೀಜಿಯವರು ಅಲ್ಲಿ ಅನುಗ್ರಹ ಸಂದೇಶ ನೀಡಿ ಬಳಿಕ ವಾಸ್ತವ್ಯಕ್ಕೆ ತೆರಳಿದರು.

ಇಂದು ಬೆಳಿಗ್ಗೆ ಎ.ವಿ.ತೀರ್ಥರಾಮರವರ ಮನೆಯಲ್ಲಿ ಪಾದ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಎ.ವಿ.ತೀರ್ಥರಾಮರ ಮನೆಯವರು ಕುಟುಂಬಸ್ಥರು ಹಾಗೂ ಡಾ| ರೇಣುಕಾಪ್ರಸಾದ್, ಅಕ್ಷಯ್ ಕೆ.ಸಿ., ಚಂದ್ರ ಕೋಲ್ಚಾರು, ಕಿರಣ್ ಬುಡ್ಲೆಗುತ್ತು, ನಿತ್ಯಾನಂದ ಮುಂಡೋಡಿ, ಪಿ.ಸಿ.ಜಯರಾಮ, ವೆಂಕಟ್ ದಂಬೆಕೋಡಿ, ಮೋಹನ್ ರಾಂ ಸುಳ್ಳಿ, ಭರತ್ ಮುಂಡೋಡಿ, ಡಿ.ಟಿ.ದಯಾನಂದ ಮತ್ತಿತರಿದ್ದರು.