ಗೂನಡ್ಕ : ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಲ್ಲಿ ಗಣಿತ ದಿನಾಚರಣೆ

0

ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಗಣಿತ ದಿನಾಚರಣೆ ಯ ಪ್ರಯುಕ್ತ ವಿವಿಧ ಮಾದರಿಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿವಿಧ ಬಗೆಯ ಗಣಿತ ಮಾದರಿ, ಕಸದಿಂದ ರಸ ಮಾದರಿ, ವಿವಿಧ ತರಕಾರಿ ಮತ್ತು ಹಣ್ಣುಗಳಿಂದ ಕಲಾ ಕೃತಿಗಳನ್ನು ಮಾಡಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮವನ್ನು ಬೆಂಗಳೂರಿನ ಐಕ್ಯೂ 41 ರೀಸರ್ಚ್ ಕನ್ಸಲ್ಟೆನ್ಸಿಯ ಶ್ರೀಮತಿ ಡಾ. ವಿಷ್ಮಾ ಶ್ರೀನಿಧಿ , ಭೌತಶಾಸ್ತ್ರ ಉಪನ್ಯಾಸಕ ಪ್ರೊ. ರತನ್, ಕಲಾ ಅಧ್ಯಾಪಕರಾದ ಪ್ರಸನ್ನ ಐವರ್ನಾಡು , ಹಾಗೂ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ಮೇಣದಿಂದ ಬರೆದ ಪಟಕ್ಕೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ವಿದ್ಯಾರ್ಥಿಗಳ ಮಾದರಿಗಳನ್ನು ಗಮನಿಸಿ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲ ಮಾದರಿಗಳು ಹೊರಹೊಮ್ಮಲಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕಿ ಶ್ರೀಮತಿ ಅಕ್ಷತಾ ನಿರೂಪಿಸಿ ವಂದಿಸಿದರು.