ಗಂಡಿಬಾಗಿಲುನಲ್ಲಿ ಅರಂತೋಡು ಶಾಹ್ ಮುಸ್ಲಿಯಾರ್ ರವರ ಮಕ್ಬರ ಕಟ್ಟಡ ಉದ್ಘಾಟನೆ

0

ಅತ್ಯಂತ ಸೂಕ್ಷ್ಮತೆಯಿಂದ ಯಾರನ್ನು ನೋಯಿಸದೆ ಧಾರ್ಮಿಕ ಮನೋಭಾವದಿಂದ ನಿಷ್ಕಂಳಕವಾಗಿ ಜೀವನ ಸಾಗಿಸಿದ ಮಹಾನ್ ವ್ಯಕ್ತಿ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ರವರು ಅವರ ಜೀವನ ಶೈಲಿ ನಮಗೆಲ್ಲ ಮಾದರಿಯಾಗಿದೆ ಎಂದು ಬಹು|ಸಯ್ಯದ್ ಝೈನುಲ್ ಆಭಿದೀನ್ ತಂಙಳ್ ದುಗಲಡ್ಕರವರು ಹೇಳಿದರು. ಅವರು ಡಿಸೆಂಬರ್ 26 ರಂದು ಕುತುಬಿಯಾ ಜುಮಾ ಮಸೀದಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಗಂಡಿಬಾಗಿಲು ಶಾಖೆ ಇದರ ಸಹಕಾರದೊಂದಿಗೆ ನಿರ್ಮಿಸಿದ ಡಾ| ಶಾಹ್ ಮುಸ್ಲಿಯಾರ್ ರವರ ಮಕ್ಬರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭಕ್ಕೆ ಶುಭಹಾರೈಸಿ ಮಾತನಾಡಿದ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಡಾ| ಶಾಹ್ ಮುಸ್ಲಿಯಾರ್ ರವರು ಅರಂತೋಡು ಮಸೀದಿಯಲ್ಲಿ ಸುಧೀರ್ಘ 35 ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು, ಅವರೊಬ್ಬ ಉತ್ತಮ ಬರಹಗಾರರಾಗಿದ್ದರು. ಕನ್ನಡ ಮತ್ತು ಮಲೆಯಾಳ ಭಾಷೆಗಳಲ್ಲಿ ಬರೆಯುತ್ತಿದ್ದರು. ಮೂವತ್ತರ ದಶಕದ ಹಿಂದೆಯೇ ಸತ್ಯವಾಣಿ, ಸರಳಪಥ, ಅಲಮುಲ್ ಹುದಾ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಯುವ ಬರಹಗಾರರಿಗೆ ಪ್ರೇರಣೆ ಶಕ್ತಿಯಾಗಿದ್ದರು ಎಂದರು.

ಮುಖ್ಯ ಅತಿಥಿಗಳಾಗಿ ಅರಂತೋಡು ಬದ್ರಿಯಾ ಜುಮ ಮಸೀದಿಯ ಖತೀಬರಾದ ಹಾಜಿ ಇಸಾಕ್ ಬಾಖವಿ, ಜುನೈದ್ ಜಪ್ರಿ ತಂಙಳ್ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ತೋಡಾರ್, ಅಸ್ಸಯ್ಯದ್ ಆನಸ್ ತಂಙಳ್ ಅಝ್ಹರಿ, ಗಂಡಿಬಾಗಿಲು ಜುಮಾ ಮಸೀದಿಯ ಖತೀಬರಾದ ಹಮೀದ್ ಸೌಕತ್ ಪೈಝಿ, ಹುಸೈನ್ ದಾರಿಮಿ ರೆಂಜಿಲಾಡಿ, ಅಬ್ದುಲ್ ಸಲಾಂ ಫೈಝಿ ಎಡಪಾಲ, ಅರಂತೋಡು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಕೆ.ಎಂ ಮೂಸಾನ್, ದಿಕ್ರ್ ಸ್ವಲಾತ್ ಮಜಿಲಿಸ್ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ದುಬಾಯಿ ಉಧ್ಯಮಿ ಸೈಪುದ್ಧೀನ್ ಪಠೇಲ್, ಜತೆ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ ಅಬ್ದುಲ್ ಖಾದರ್ ಪಠೇಲ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್ ಅರಂತೋಡು, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಆಶಿಕ್ ಅರಂತೋಡು, ಅಬ್ದುಲ್ ರಹಿಮಾನ್ ಪೈಝಿ ಕುಂತೂರು, ಹಸೈನಾರ್ ಹಾಜಿ ಕೊಯಿಲ, ಜಮಾಅತ್ ಕಾರ್ಯದರ್ಶಿ ಆದಂ ಗಂಡಿಬಾಗಿಲು, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ಝಿಯಾದ್ ಗಂಡಿಬಾಗಿಲು, ಕಲಂದರ್, ನಿಸಾರ್ ಮೊದಲಾದವರು ಉಪಸ್ಥಿತರಿದ್ದರು. ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂಹಾಜಿ ಬಡ್ಡಮೆ ಅಧ್ಯಕ್ಷತೆ ವಹಿಸಿದರು, ಪತ್ರಕರ್ತ ಸಿದ್ಧೀಕ್ ನೀರಾಜೆ ಸ್ವಾಗತಿಸಿ ವಂಧಿಸಿದರು ಖ್ಯಾತವಾಗ್ಮಿ ಬಹು ಯು.ಕೆ ಹನೀಫ್ ನಿಝ್ಹಾಮಿಯವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು. ಕೊನೆಯಲ್ಲಿ ಅನ್ನಧಾನ ನಡೆಯಿತು.