ಕಾನತ್ತೂರು ಕಳಿಯಾಟ ಮಹೋತ್ಸವ ಸಂಪನ್ನ

0

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಕಳಿಯಾಟ ಮಹೋತ್ಸವವು ಡಿ. 29 ರಿಂದ ಜ. 2 ರ ತನಕ ನಡೆಯಿತು.

ಡಿ. 28 ರಂದು ಸಾಯಂಕಾಲ ಶುದ್ಧಿ ಕಲಶ, ಪ್ರಾರ್ಥನೆ, ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆ ನಡೆಯಿತು. ಡಿ. 29 ರಂದು ಭಂಡಾರ ಆಗಮನವಾಗಿ, ರಾತ್ರಿ ಎಳೆಯೋರ್ ದೈವ ನಡೆಯಿತು. ಡಿ. 30ರಂದು ಮುಂಜಾನೆ ಚಾಮುಂಡಿ ದೈವ, ಬೆಳಿಗ್ಗೆ ಪಂಜುರ್ಲಿ ದೈವ, ಸಂಜೆ ಮೂತೋರ್ ದೈವ, ರಾತ್ರಿ ಸಿಡಿಮದ್ದು ಪ್ರದರ್ಶನ ನಡೆಯಿತು. ನಂತರ ಬಂಬೇರಿಯಾ, ಮಾಣಿಚ್ಚಿ ದೈವ ನಡೆಯಿತು.

ಡಿ. 31 ರಂದು ಶನಿವಾರ ಚಾಮುಂಡಿ ದೈವ, ಬೆಳಿಗ್ಗೆ ಕುಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವ, ರಾತ್ರಿ ಪಾಷಾಣಮೂರ್ತಿ ದೈವ ನಡೆಯಿತು.


ಜ.1 ರಂದು ಬೆಳಿಗ್ಗೆ ರಕ್ತೇಶ್ವರಿ ದೈವ, ತುಲಾಭಾರ, ಅಪರಾಹ್ನ, ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯಿತು. ಜ. 2ರಂದು ರಕ್ತೇಶ್ವರಿ ದೈವ, ತುಲಾಭಾರ ಅಪರಾಹ್ನವಿಷ್ಣುಮೂರ್ತಿ ದೈವ, ಪ್ರೇತವಿಮೋಚನೆ ನಡೆಯಿತು. ಜ 3ರಂದು ಬೆಳಿಗ್ಗೆ ಕಳಗ ಒಪ್ಪಿಸಿದ ಬಳಿಕ ಭಂಡಾರ ನಿರ್ಗಮನವಾಯಿತು.

ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ಕೆ. ಪಿ. ಮಾಧವನ್ ನಾಯರ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನೆರವೇರಿತು.