ಸುಳ್ಯ ಜಾತ್ರೆಯ ಸಂತೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ: ತುರ್ತು ಸಭೆಯಲ್ಲಿ ನಿರ್ಧಾರ

0

ಸುಳ್ಯ ಜಾತ್ರೋತ್ಸವದ ಸಂತೆಯಲ್ಲಿ ಎಲ್ಲ ಧರ್ಮೀಯರಿಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಎರಡು ದಿನದ ಮೊದಲು ನಿರ್ಣಯ ಕೈಗೊಂಡಿದ್ದ ದೇಗುಲದ ಜೀರ್ಣೋದ್ಧಾರ ಸಮಿತಿ, ಹಿಂದೂ ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ನಿರ್ಣಯ ರದ್ದು ಪಡಿಸಿದ್ದು, ಹಿಂದೂಗಳಿಗೆ ಮಾತ್ರ ಅವಕಾಶ ಎಂಬ ನಿರ್ಧಾರಕ್ಕೆ ಬಂದಿದೆ.

ಸಂತೆಯಲ್ಲಿ ವ್ಯಾಪಾರಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಚೆನ್ನಕೇಶವ ದೇವಸ್ಥಾನದ ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ|ಕೆ.ವಿ. ಚಿದಾನಂದ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ, ತಹಶೀಲ್ದಾರರಿಗೆ, ಪೊಲೀಸ್ ಇಲಾಖೆಗೆ ಹಿಂದೂ ಹಿತ ರಕ್ಷಣಾ ವೇದಿಕೆ ಮನವಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಡಾ|ಕೆ.ವಿ. ಚಿದಾನಂದರವರು ಸಂಜೆ ತುರ್ತು ಸಭೆ ಕರೆದಿದ್ದರು. ಅದರಂತೆ ಎಲ್ಲರ ನಿರ್ಣಯವನ್ನು ತೆಗೆದುಕೊಂಡು ಅಂತಿಮವಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂಬ ನಿರ್ಧಾರಕ್ಕೆ ಬರಲಾಯಿತೆಂದು ತಿಳಿದುಬಂದಿದೆ.