ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಪೇಟೆಯ ತ್ಯಾಜ್ಯ ವಿಂಗಡಣೆ,ಕೊಳಚೆ ನೀರಿನ ಬಗ್ಗೆ ವರ್ತಕರ ಸಭೆ

0

ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೋಟೆಲ್ ,ಬಾರ್,ರೆಸ್ಟೋರೆಂಟ್ ,ಬೇಕರಿ,ಕೋಳಿ ಅಂಗಡಿ,ಜ್ಯೂಸ್ ಅಂಗಡಿ ವ್ಯಾಪಾರಸ್ಥ ವರ್ತಕರ ಸಭೆಯು ಜ.04 ರಂದು ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರು ಅಧ್ಯಕ್ಷತೆ ವಹಿಸಿ ತ್ಯಾಜ್ಯ ವಿಂಗಡನೆ,ಕೊಳಚೆ ನೀರು ಬಿಡುವ ಬಗ್ಗೆ ಪೇಟೆಯ ಸಮಸ್ಯೆಗಳ ಬಗ್ಗೆ ಮಾತನಾಡಿದರು.ಪೇಟೆಯಲ್ಲಿ ಚರಂಡಿ ನೀರು ವಾಸನೆ ಬರುತ್ತಿದೆ.ಇದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರುಗಳು ಹೋಗಿವೆ.ಈ ಬಗ್ಗೆ ನಾವು ಕೆಲವರಿಗೆ ನೋಟೀಸು ಮಾಡಿದ್ದೇವೆ.ಯಾವುದೇ ಪ್ರಯೋಜನ ಆಗಲಿಲ್ಲ.ಇವತ್ತು ವರ್ತಕರ ಸಭೆ ಕರೆದಿದ್ದೇವೆ.ಆದರೆ ಕೆಲವು ಅಂಗಡಿಯವರು ಮಾತ್ರ ಸಭೆಗೆ ಬಂದಿದ್ದಾರೆ.ಹೆಚ್ಚು ಜನ ಬರುತ್ತಿದ್ದರೆ ಕೊಳಚೆ ನೀರು,ತ್ಯಾಜ್ಯ ನಿರ್ವಹಣೆ ಹೇಗೆ ಮಾಡಬಹುದೆಂದು ಮುಕ್ತ ಚರ್ಚೆ ಮಾಡಬಹುದಿತ್ತು.ಎಲ್ಲರ ಸಹಕಾರದಿಂದ ಮಾತ್ರ ಇದು ಸಾಧ್ಯ. ಪೇಟೆಯಲ್ಲಿ ತ್ಯಾಜ್ಯ ಸಂಗ್ರಹಣಾ ವಾಹನ ಬರುವಾಗ ಹಸಿ ಕಸ ಒಣ ಕಸ ಬೇರೆ ಬೇರೆ ಮಾಡಿಕೊಟ್ಟರೆ ತ್ಯಾಜ್ಯ ನಿರ್ವಹಣೆ ಮಾಡಲು ಸುಲಭ ಆಗುತ್ತದೆ.ಇಲ್ಲವಾದಲ್ಲಿ ಘನತ್ಯಾಜ್ಯ ಘಟಕದಲ್ಲಿ ಕೆಲಸ ಜಾಸ್ತಿಯಾಗುತ್ತದೆ.ನಿರ್ವಹಣೆ ಮಾಡಲು ಹೆಚ್ಚು ಜನ ಕೂಡ ಬೇಕಾಗುತ್ತದೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಪಿ.ಡಿ.ಒ ಶ್ಯಾಮ ಪ್ರಸಾದ್ ರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಬೆಳ್ಳಾರೆ ಪೇಟೆಯಲ್ಲಿ ಕೊಳಚೆ ನೀರು,ತ್ಯಾಜ್ಯ ವಿಂಗಡನೆ,ವ್ಯಾಪಾರ ಲೈಸನ್ಸ್ ನವೀಕರಣದ ಬಗ್ಗೆ ವರ್ತಕರ ಸಭೆ ಕರೆದಿದ್ದೇವೆ.ಕೊಳಚೆ ನೀರಿನಿಂದ ಪೇಟೆಯಲ್ಲಿ ಸಮಸ್ಯೆಗಳಾಗುತ್ತಿದೆ.ಹೋಟೆಲ್,ರರೆಸ್ಟೋರೆಂಟ್,ಜ್ಯೂಸ್ ಅಂಗಡಿ,ಕೋಳಿ ಅಂಗಡಿಗಳು,ಲಾಡ್ಜ್ ಗಳಿಂದ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ.ಇದನ್ನು ಯಾವ ರೀತಿ ಸರಿಮಾಡಬಹುದು ಎಂಬುದರ ಬಗ್ಗೆ ವರ್ತಕರ ಅಭಿಪ್ರಾಯ ಬೇಕಾಗಿದೆ.ಚರಂಡಿಗೆ ಕೊಳಚೆ ನೀರು ಬಿಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಪಂಚಾಯತ್ ನಿಂದ ಕೈಗೊಳ್ಳಬಹುದು ಆದರೆ ಇದು ವೈಮನಸ್ಸಿಗೆ ಕಾರಣವಾಗುತ್ತದೆ.ಆದಷ್ಟು ಎಲ್ಲ ವರ್ತಕರು ಸೇರಿ ತಮ್ಮ ಅಭಿಪ್ರಾಯದಿಂದ ಮತ್ತು ಎಲ್ಲರ ಸಹಕಾರದಿಂದ ಇದನ್ನು ಸರಿಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು.ತ್ಯಾಜ್ಯ ,ಕಸಗಳನ್ನು ಹೆಕ್ಕಿ ಕ್ಲೀನ್ ಮಾಡುವುದಕ್ಕಿಂತ ಕಸ ಹಾಕುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ಸಭೆಯಲ್ಲಿದ್ದ ಪವನ್ ಶೆಣೈ, ಸುಪ್ರೀತ್ ಶೆಣೈ,ಉಮೇಶ್ ಹೆಗ್ಡೆ,ಕೆ.ಎಚ್.ಅಬ್ದುಲ್ಲ, ಅಬ್ದುಲ್ಲ ಬೆಳ್ಳಾರೆ,ಗೀತಾ ಪ್ರೇಮ್ ಮಯ್ತಿತರರು ತಮ್ಮ‌ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,ಶ್ರೀಮತಿ ಜಯಶ್ರೀ,ಭವ್ಯ,ಮಣಿಕಂಠ,ಎನ್.ಎಸ್. ಎಸ್.ಡಿ.ವಿಠಲದಾಸ್,ಅನಿಲ್ ರೈ ಪುಡ್ಕಜೆ ಉಪಸ್ಥಿತರಿದ್ದರು.