ಸುಬ್ರಹ್ಮಣ್ಯ: ಠಾಣೆಯ ಮುಂದೆ ನಡೆಯಬೇಕಿದ್ದ ಪ್ರತಿಭಟನೆ ರದ್ದು, ಕಾದು ನೋಡಲು ಹಿಂದೂ ಸಂಘಟನೆಗಳ ನಿರ್ಧಾರ

0

ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಇಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ನಿರ್ಧಾರ ಕೈಗೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ಹಿಂದೂ ಮುಖಂಡ ಕಿಶೋರ್‍ ಶಿರಾಡಿ ಸುದ್ದಿಗೆ ತಿಳಿಸಿದ್ದಾರೆ.

ಪೊಲೀಸರು ಅಮಾಯಕ ರ ಮೇಲೆ ಕೇಸು ಹಾಕುತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜ.7 ರಂದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಎದುರು ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಕರೆಕೊಟ್ಟಿದ್ದವು. ಇಂದು ಬೆಳಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಎದುರು ಸುಮಾರು ನೂರರಷ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೇರಿದ್ದರು. ಹಿಂದು ಜಾಗರಣಾ ವೇದಿಕೆಯ ರವಿರಾಜ್ ಶೆಟ್ಟಿ, ಭಜರಂಗದಳ ರಾಜ್ಯ ಸಂಚಾಲಕ ರಘು, ಹಿಂದೂ ಜಾಗರಣ ವೇದಿಕೆಯ ನರಸಿಂಹ ಶೆಟ್ಟಿ ಮಾಣಿ, ಚಿದಾನಂದ, ಅಶೋಕ್ ಆಚಾರ್ಯ, ಕಿಶೋರ್ ಕುಮಾರ್ ಶಿರಾಡಿ, ರಾಜೇಶ್ ಎನ್ ಎಸ್ ಮತ್ತಿತರ ಪ್ರಮುಖರಿದ್ದರು.

ಪ್ರತಿಭಟನೆ ನಡೆಸುವುದಕ್ಕೂ ಮೊದಲು ಕಿಶೋರ್‍ ಶಿರಾಡಿ ಮತ್ತಿತರ ಪ್ರಮುಖರು
ಸುಬ್ರಹ್ಮಣ್ಯ ಠಾಣಾ ಎಸ್ ಐ ಮಂಜುನಾಥ್ ರೊಂದಿಗೆ ಕೇಸಿನ ಕುರಿತು ಮಾಹಿತಿ ಪಡೆದರು. ಕೆಲ ಸಮಯ ಎಸ್ ಐ ಯೊಂದಿಗೆ ಮಾತುಕತೆ ನಡೆಸಿದ ಪ್ರಮುಖರು ಠಾಣೆಯಿಂದ ಹೊರಗೆ ಬಂದು ಸೇರಿದ್ದ ನೂರಾರು ಕಾರ್ಯಕರ್ತರಿಗೆ ಎಸ್ ಐ ಯೊಂದಿಗೆ ಮಾತನಾಡಿದ ವಿಚಾರವನ್ನು ಮುಂದಿಟ್ಟು
ಇಂದಿನ ಪ್ರತಿಭಟನೆಯನ್ನು ಮುಂದೂಡುವುದಾಗಿ ತಿಳಿಸಿದರು.

ಪ್ರತಿಭಟನೆ ಮುಂದೂಡಿದ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿದ ಕಿಶೋರ್‍ ಶಿರಾಡಿ ಅವರು ಅಮಾಯಕ ಹಿಂದೂ ಯುವಕರ ಮೇಲೆ ಕೇಸುದಾಖಲಿಸಿರುವ ಕುರಿತು ಪ್ರತಿಭಟನೆಗೆ ನಿರ್ಧರಿಸಿದ್ದೇವು.
ಆದರೆ ಪ್ರತಿಭಟನೆಗೂ ಮೊದಲು ಎಸ್ ಐ ಅವರೊಂದಿಗೆ ಮಾತನಾಡಿ ಕೇಸಿನ ಮಾಹಿತಿ ಪಡೆದೆವು. ನಮ್ಮ ಅಹವಾಲನ್ನು ತಿಳಿಸಿದ್ದೇವೆ. ಅವರು ನ್ಯಾಯಯುತವಾಗಿ ತನಿಖೆ ನಡೆಸುವುದಾಗಿ ತಿಳಿಸಿದ್ದರಿಂದ ನಾವು ಕಾದು ನೋಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ನಿರ್ಧಾರ ಕೈಗೊಳ್ಳುವುದಾಗಿ, ಇಂದಿನ ಪ್ರತಿಭಟನೆ ಕೈ ಬಿಟ್ಟಿರುವುದಾಗಿ ಸಂಘಟನೆಯ ಮುಖಂಡರು ಮಾಹಿತಿ ನೀಡಿದ್ದಾರೆ.