ಸುಳ್ಯ ಪೊಲೀಸ್ ಠಾಣೆಯ ದೇವರ ಕಟ್ಟೆಯಲ್ಲಿ ಚೆನ್ನಕೇಶವ ದೇವರ ಕಟ್ಟೆ ಪೂಜೆ

0

ಸುಳ್ಯ ಜಾತ್ರೋತ್ಸವದ ಅಂಗವಾಗಿ ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ನಿನ್ನೆ ನಡೆದಿದ್ದು, ಸುಳ್ಯ ಪೊಲೀಸ್ ಠಾಣಾ ಆವರಣದ ದೇವರ ಕಟ್ಟೆಯಲ್ಲೂ ಶ್ರೀದೇವರ ವೈಭವದ ಪೂಜಾ ಕಾರ್ಯಕ್ರಮ ನಡೆಯಿತು.

ಪೂಜಾ ಕಾರ್ಯಕ್ರಮಗಳನ್ನು ಪುರೋಹಿತರು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಅಪರಾಧ ವಿಭಾಗದ ಎಸ್ ಐ ರತ್ನಕುಮಾರ್, ಪ್ರೊಬೆಷನರಿ ಎಸ್ ಐ ಸರಸ್ವತಿ, ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಹಾಗೂ ಪೊಲೀಸ್ ಕುಟುಂಬಸ್ಥರು, ಸ್ಥಳೀಯರು ಭಾಗವಹಿಸಿದ್ದರು.