ಸುನ್ನೀ ಬಾಲ ಸಂಘ ಏಣಾವರ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಮಿಫ್ತಾಹುಲ್ ಉಲೂಂ ಮದರಸ ಸಭಾಂಗಣದಲ್ಲಿ ಮುದಬ್ಬಿರ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿ ಬಳಿಕ ಎಸ್ ಬಿ ಎಸ್ ಬಗ್ಗೆ ಸದರ್ ಮುಅಲ್ಲಿಂ ಎ.ಎಂ.ಫೈಝಲ್ ಝುಹ್ರಿ ಯವರು ಮಾತನಾಡಿ ನೂತನ ಸಮಿತಿ ಆಯ್ಕೆಗೆ ನೇತೃತ್ವ ವಹಿಸಿದರು.








ಅಧ್ಯಕ್ಷರಾಗಿ ಮುಹಮ್ಮದ್ ಮಿಸ್ಬಾಹ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಿಯಾಝ್, ಕೋಶಾಧಿಕಾರಿ ಯಾಗಿ ಮುಹಮ್ಮದ್ ಸಫ್ವಾನ್, ಉಪಾಧ್ಯಕ್ಷರಾಗಿ ಶಮೀಲ್, ಜೊತೆ ಕಾರ್ಯದರ್ಶಿ ಗಳಾಗಿ ಅಹ್ಮದ್ ಜಾಸಿಂ, ಮುಹಮ್ಮದ್ ನಜ್ವಾನ್ ರವರನ್ನೂ, ಸದಸ್ಯರಾಗಿ ಸುಹೈಲ್, ಯೂಸುಫ್, ಸುಲ್ತಾನ್ ರವರುಗಳನ್ನೂಆಯ್ಕೆ ಮಾಡಲಾಯಿತು. ಮದರಸಾ ನಾಯಕಿಯಾಗಿ ಆಯಿಷತ್ ಶೈಮ, ಉಪನಾಯಕಿಯಾಗಿ ಆಯಿಷತ್ ಮುಫೀದ, ಆರೋಗ್ಯ ಇನ್ಚಾರ್ಜರ್ ಫಾತಿಮತ್ ಮುಬಶ್ಶಿರ, ಶುಚಿತ್ವ ಇನ್ಚಾರ್ಜರ್ ಮಾಶಿಯ ಫಾತಿಮ ರವರುಗಳನ್ನೂ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಫ್ವಾನ್ ಏಣಾವರ ಸ್ವಾಗತಿಸಿ, ನಿಯಾಝ್ ಏಣಾವರ ವಂದಿಸಿದರು.









