ಸುಳ್ಯ ಪ್ರಾ.ಸ.ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಪ್ರಭಾಕರನಾಯಕ್, ಉಪಾಧ್ಯಕ್ಷರಾಗಿ ಸೋಮನಾಥ ಪೂಜಾರಿ ಅವಿರೋಧ ಆಯ್ಕೆ

0

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪ್ರಭಾಕರ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಸೋಮನಾಥ ಪೂಜಾರಿ, ಕೋಶಾಧಿಕಾರಿಯಾಗಿ ಶ್ರೀಮತಿ ಸುವರ್ಣಿನಿ ಎನ್.ಎಸ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.


ಚುನಾವಣಾಧಿಕಾರಿಯಾಗಿ ಸಿ.ಡಿ.ಒ ಶಿವಲಿಂಗಯ್ಯ ರವರು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ವಿಶ್ವನಾಥ ಬಿಳಿಮಲೆ, ರಮೇಶ ಪಿ, ಚಂದ್ರಶೇಖರ ರೈ, ಶೇಷಪ್ಪ ಪಿ, ಭಗೀರಥ ಕೋಲ್ಚಾರು, ಶ್ರೀಮತಿ ದೇವಮ್ಮ ಎಸ್, ಭಾಗೀರಥಿ ಮುರುಳ್ಯ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಉಷಾ ಸುವರ್ಣ ಮತ್ತು ಸಿಬ್ಬಂದಿ ವರ್ಗದ ವರು ಉಪಸ್ಥಿತರಿದ್ದರು.