ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕ್ವೆಸ್ಟ್ ಕಾರ್ಯಕ್ರಮ ಅನುಷ್ಠಾನ

0


ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಸುಳ್ಯ ತಾಲೂಕಿನ ೬ ಶಾಲೆಗಳಲ್ಲಿ ಲಯನ್ಸ್ ಕ್ವೆಸ್ಟ್ ಸ್ಕಿಲ್ ಪರ್ ಎಡೆಲ್‌ಸೆನ್ಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಯಿತು. ಕೆವಿಜಿ ಐಪಿಎಸ್, ಸುಳ್ಯ, ರೋಟರಿ ಆಂಗ್ಲಮಾಧ್ಯಮ ಶಾಲೆ ಸುಳ್ಯ, ಸೈಂಟ್ ಜೋಸೆಫ್ ಸುಳ್ಯ, ಗ್ರೀನ್ ವ್ಯೂ ಶಾಲೆ ಜಟ್ಟಿಪಳ್ಳ, ಎಂಜಿಎಂ ಆಂಗ್ಲಮಾಧ್ಯಮ ಶಾಲೆ ಕೊಡಿಯಾಲಬೈಲು ಶಾಲೆ ಹಾಗೂ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಶಾಲೆಗಳಲ್ಲಿ ಕ್ವೆಸ್ಟ್ ಕಾರ್ಯಕ್ರಮ ಅನುಷ್ಠಾನಗೊಳಿಸಿ ಪಠ್ಯಪುಸ್ತಕ ವಿತರಿಸಲಾಯಿತು.

ಕ್ವೆಸ್ಟ್ ಅಸೋಸಿಯೇಟ್ ಕೋ-ಆರ್ಡಿನೇಟರ್ ರತ್ನ ಚರ್ಮಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಾಶ್ರೀ ಜೆ. ರೈ, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ರಂಗನಾಥ್ ಪಿ.ಎಂ., ರಾಮಕೃಷ್ಣ ರೈ, ಹೂವಯ್ಯ ಸೂಂತೋಡು, ರಮೇಶ್ ಶೆಟ್ಟಿ, ತಮ್ಮಯ್ಯ ಎಂ.ಎನ್, ಹಾಗೂ ಆನಂದ ಪೂಜಾರಿ ಉಪಸ್ಥಿತರಿದ್ದರು.