ಸಂಪಾಜೆ : ವಿಕಲಚೇತನರ ಗ್ರಾಮ ಸಭೆ

0

ವಿಶ್ವ ವಿಕಲಚೇತನ ದಿನಾಚರಣೆಯ ಅಂಗವಾಗಿ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ವಿಕಲಚೇತನರ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು, ನೋಡೆಲ್ ಅದಿಕಾರಿ ಚಂದ್ರಶೇಖರ ಬಿ.ತಾಲೂಕು ವಿಕಲಚೇತನರ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಇವರು ವಿಕಲಚೇತನರ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಬಗ್ಗೆ ಚರ್ಚೆ ನಡೆದು ಹಲವು ನಿರ್ಣಯ ಕೈಗೊಂಡು ಸರಕಾರದ ಗಮನಕ್ಕೆ ತರಲು ತೀರ್ಮಾನಿಸಲಾಯಿತು ಪ್ರಮುಖವಾಗಿ.50% ಅಂಗ ವಿಕಲತೆ ಇರುವ ವಿಕಲಚೇತನರಿಗೆ ವಾಹನ ವೆವಸ್ಥೆ, ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಅವರ ಮನೆಗಳಿಗೆ ಉತ್ತಮವಾದ ರಸ್ತೆ ವೆವಸ್ಥೆ, ವಿಕಲಚೇತನರಿಗೆ ಔಷದಿಗೆ ಹೋಗಲು ಪ್ರತಿ ತಾಲೂಕಿಗೆ ಆಂಬುಲೆನ್ಸ್ ಮಾದರಿ ವಾಹನದ ವೆವಸ್ಥೆ ಅಥವಾ ವಾಹನದ ಬಾಡಿಗೆ. ವಿಕಲಚೇತನರಿಗೆ ವಸತಿ ವೆವಸ್ಥೆಗೆ 5 ಲಕ್ಷ ಅನುದಾನ. ಬಾಡಿಗೆ ಮನೆಯಲ್ಲಿ ಇರುವ ವಿಕಲಚೇತನರಿಗೆ ವಸತಿ ವೆವಸ್ಥೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಸುಂದರಿ ಮುಂಡ ಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಗೂನಡ್ಕ ಎಸ್. ಕೆ. ಹನೀಫ್ ಸಂಪಾಜೆ, ಸವಾದ್ ಗೂನಡ್ಕ ಅನುಪಮಾ, ವಿಮಲಾ, ಸುಶೀಲ,ಆಗು ಅದಿಕಾರಿ ವರ್ಗದವರು ಉಪಸ್ಥಿತರಿದ್ದರು.

ಹರ್ಷಿತ್ ಕಾರ್ಯಕ್ರಮ. ನಿರೂಪಿಸಿದರು. ವಿಕಲಚೇತನರು ಹಾಗೂ ಅವರ ಪೋಷಕರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು