ನೀರಬಿದಿರೆ ತರವಾಡು ಮನೆ; ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಧರ್ಮನಡಾವಳಿ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನೀರಬಿದಿರೆ ತರವಾಡು ಮನೆಯಲ್ಲಿ ನಾಗಪ್ರತಿಷ್ಠೆ, ಕೆಂಚಮ್ಮ ದೇವಿ , ಸಬ್ಬಮ್ಮ ದೇವಿ ಮತ್ತು ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಧರ್ಮ ನಡಾವಳಿ ಜ.15ರಿಂದ 18ರವರೆಗೆ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜ.15ರಂದು ಸಂಜೆ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ಮೊದಲಾದ ವೈದಿಕ ಕಾರ್ಯಕ್ರಮ ನಡೆಯಿತು.


ಜ. 16ರಂದು ಬೆಳಿಗ್ಗೆ ಶ್ರೀ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ಬಳಿಕ ಕುಂಭ ಲಗ್ನದ ಸುಮುಹೂರ್ತದಲ್ಲಿ
ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು. ಜ. 17ರಂದು ಬೆಳಿಗ್ಗೆ ಶ್ರೀವೆಂಕಟರಮಣ ದೇವರ ಹರಿಸೇವೆ, ಅಪರಾಹ್ನ ಕೆಂಚಿರಾಯನ ಪೂಜೆ ಸಂಜೆ ಭಂಡಾರ ತೆಗೆದು ಗುರುಕಾರ್ನೋರು, ಸತ್ಯದೇವತೆ, ಪಾಷಾಣಮೂರ್ತಿ, ಅಜ್ಜಿ ಪಾಷಾಣಮೂರ್ತಿ, ವರ್ಣರ ಪಂಜುರ್ಲಿ, ಗುಪ್ಪೆಪಂಜುರ್ಲಿ, ಮಣಿಪಾಂತ ಪಂಜುರ್ಲಿ ದೈವಗಳ ನೇಮೋತ್ಸವ,ಜ.18ರಂದು ಧರ್ಮದೈವ ಶ್ರೀ ರುದ್ರಚಾಮುಂಡಿ ನೇಮೋತ್ಸವ ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಸಂಜೆ ಗುಳಿಗ ಮತ್ತು ಅಂಗಾರ ದೈವಗಳಿಗೆ ಕೋಲ ನಡೆಯಲಿದೆ. ಕುಟುಂಬದ ಯಜಮಾನರಾದ ಭಾಸ್ಕರ ಗೌಡ ನೀರಬಿದಿರೆ ಮತ್ತು ಕುಟುಂಬಸ್ಥರು, ಬಂಧು ಮಿತ್ರರು, ಊರವರು ಉಪಸ್ಥಿತರಿದ್ದರು.