ಕೊಲ್ಲಮೊಗ್ರು ಗ್ರಾಮ ಸಭೆ

0

ಅಂಗನವಾಡಿ ಕಾರ್ಯಕರ್ತರ ಮುಷ್ಕರಕ್ಕೆ ಆಕ್ಷೇಪ, ಪರ್ಯಾಯ ವ್ಯವಸ್ಥೆ ಗೆ ಆಗ್ರಹ

ಕೊಲ್ಲಮೊಗ್ರು ಗ್ರಾ.ಪಂ ನ ಗ್ರಾಮ ಸಭೆ ಇಂದು ಮಯೂರ ಕಲಾ ಮಂದಿರ ಕೊಲ್ಲಮೊಗ್ರು ಇಲ್ಲಿ ನಡೆಯಿತು.

ಸಭೆಯಲ್ಲಿ ತಾಲೂಕಿನಾದ್ಯಂತ ಅಂಗನವಾಡಿ ಕಾರ್ಯಕರ್ತರ ಮುಷ್ಕರ ನಡೆುತಿದ್ದು ಇದು ನಮ್ನ ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ, ಪರ್ಯಾಯ ವ್ಯವಸ್ಥೆ ಮಾಡಿ ಮಕ್ಕಳಿಗೆ ತರಗತಿ ನಡೆಸುವಂತೆ ಆಗ್ರಹ ಕೇಳಿ ಬಂತು. ಇದಲ್ಲದೆ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ಹಾನಿ ಬಗ್ಗೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ಲಕ್ಷದ ಕಾಂಕ್ರೀಟ್ ರಸ್ತೆ ಕೆಲಸಕ್ಕೆ ಹಣ ಬರಬೇಕಾದ್ರೆ 15 ದಿವಸದ ಪೋಟೋ ತೆಗೆಯುವ ತೊಂದರೆ ಬಗ್ಗೆ ಚರ್ಚೆಗಳು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಉದಯ ಕೊಪ್ಪಡ್ಕ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆಯ ವಲಯರಾಣ್ಯಧಿಕಾರಿ ಶೃೆಲಜಾ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ ಎಸ್, ಶುಭಲತಾ, ಮೋಹಿನಿ ಕಟ್ಟ, ಮಾದವ ಕೆ, ಶಿವಮ್ಮ, ಪುಷ್ಪರಾಜ್ ಪಿ.ಎಲ್, ಅಶ್ವಥ್ ವೈ ಯು, ಪಿ.ಡಿ.ಒ ರವಿಚಂದ್ರ ಉಪಸ್ಥಿತರಿದ್ದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.


ಪಿ.ಡಿ.ಒ ರವಿಚಂದ್ರ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಂತೋಷ್ ವರದಿ ವಾಚನ ಮಾಡಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಶ್ಯಾಮ್ ಸುಂದರ್ ಕೋಲ್ಚಾರು, ಚಂದ್ರಶೇಖರ ಕೊಂದಾಳ, ಹೇಮಂತ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕ್ಷೇಮ ಕೇಂದ್ರದ ವತಿಯಿಂದ ಬಿ.ಪಿ, ಶುಗರ್ ಉಚಿತ ಪರೀಕ್ಷೆ ನಡೆಯಿತು.