ಸುಳ್ಯ: ಮಾದಕ ವಸ್ತುಗಳ ಸೇವೆನೆಯ ವಿರುದ್ಧ ಎಸ್‌ಬಿಎಸ್ ವತಿಯಿಂದ ಜನಜಾಗೃತಿ ಜಾಥಾ

0

ಮಲು ಸೇವನೆಯಿಂದ ನಾಡಿಗೆ ಆಪತ್ತು: ಮುಖ್ತಾರ್ ಸಖಾಫಿ

ಜನವರಿ 21ರಂದು ರಾಜ್ಯದಾದ್ಯಂತ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಹಮ್ಮಿಕೊಂಡ ಮಾದಕ ವ್ಯಸನಗಳ ವಿರುದ್ಧದ ಜಾಗೃತಿ ಅಭಿಯಾನದ ಅಂಗವಾಗಿ ಎಸ್ ಜೆ ಎಂ ಸುಳ್ಯ ರೇಂಜ್ ವತಿಯಿಂದ
‘ಲಹರಿಯ ಆವೇಶ ಸಮಾಜದ ವಿನಾಶ, ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿರುವ ಲಹರಿ ಪದಾರ್ಥಗಳ ವಿರುದ್ಧ ಎಸ್ ಬಿ ಎಸ್ ಬಾಲ ಮಸೀರ ಎಂಬ ಕಾರ್ಯಕ್ರಮದೊಂದಿಗೆ ಕಾಲ್ನಡಿಗೆ ಜಾಥಾ ಹಾಗೂ ಸಂದೇಶ ಭಾಷಣವನ್ನು ಹಮ್ಮಿಕೊಳ್ಳಲಾಗಿತ್ತು.


ಮೊಗರ್ಪಣೆ ದರ್ಗಾದಲ್ಲಿ ಸ್ಥಳೀಯ ಖತೀಬ್ ಹಾಫಿಳ್ ಶೌಖತ್ ಅಲಿ ಸಖಾಫಿ ವಿಶೇಷ ಪ್ರಾರ್ಥನೆ ನಡೆಸಿ ,
ಮೊಗರ್ಪಣೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರು ಸುಳ್ಯ ರೇಂಜ್ ಅಧ್ಯಕ್ಷ ಮಹಮ್ಮದ್ ಸಖಾಫಿ ಹಾಗೂ ಸುಳ್ಯ ರೇಂಜ್ ಎಸ್ ಎಂ ಎ ಅಧ್ಯಕ್ಷ ಹಮೀದ್ ಬೀಜ ಕೊಚ್ಚಿ ಯವರಿಗೆ ಧ್ವಜ ಹಸ್ತಾಂತರಿಸಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.
ಸುಳ್ಯ ತಾಲೂಕಿನ ವಿವಿಧ ಭಾಗಗಳ 20ಕ್ಕೂ ಹೆಚ್ಚು ಮದರಸಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿ ನಗರದ ಉದ್ದಕ್ಕೂ ಮಾದಕ ವ್ಯಸನಗಳ ಜಾಗೃತಿ ಕುರಿತು ಘೋಷಣೆಯನ್ನು ಕೂಗಿದರು.


ಗಾಂಧಿನಗರ ಪೆಟ್ರೋಲ್ ಬಂಕ್ ಮುಂಬಾಗ ಕಾರ್ಯಕ್ರಮದ ಸಮಾರೋಪ ನಡೆಯಿತು. ಸಮಾರಂಭವನ್ನು ಎಸ್ ಜೆ ಎಂ ರಾಜ್ಯ ಸಮಿತಿ ಕೋಶಾದಿಕಾರಿ ಇಬ್ರಾಹಿಂ ಸಖಾಫಿ ಪುಂಡೂರು ಉದ್ಘಾಟಿಸಿದರು ಮುಖ್ತಾರ್ ಹಿಮಮಿ ಸಖಾಫಿ ಮೇನಾಲ ರವರಿಂದ ಜಾಗೃತಿ ಸಂದೇಶ ಭಾಷಣ ನಡೆಸಿದರು.
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿಎಂ ಶಹೀದ್, ಸಜ್ಜನ ಪ್ರತಿಷ್ಟಾನ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಶುಭ ಹಾರೈಸಿದರು. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ರಿಯಾಝ್ ಕಟ್ಟೆಕ್ಕಾರ್ಸ್,ಎಸ್ ವೈ ಎಸ್ ಸುಳ್ಯ ಸೆಂಟರ್ ಅಧ್ಯಕ್ಷ ಅಬ್ದುಲ್ ಲತೀಫ್ ಜೌಹರಿ ಮೇನಾಲ, ಎಸ್ ಎಂ ಎ ಸದಸ್ಯ ಹಸೈನಾರ್ ಜಯನಗರ ಸಿದ್ದೀಖ್ ಕಟ್ಟೆಕ್ಕಾರ್ಸ್, ಎಸ್ ಎಸ್ ಎಫ್ ಕಾರ್ಯಕರ್ತ ಸಿದ್ದೀಖ್ ಗೂನಡ್ಕ ರೇಂಜ್ ನಾಯಕರುಗಳಾದ ನಿಝಾರ್ ಸಖಾಫಿ ಮುಡೂರು, ಶಾಹುಲ್ ಹಮೀದ್ ಸಖಾಫಿ ಜಾಲ್ಸೂರು, ಮಹಮ್ಮದ್ ಅಲಿ ಸಖಾಫಿ ಗೂನಡ್ಕ,ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ, ಶಾಫಿ ಮಿಸ್ಬಾಹಿ ಪೆರಾಜೆ, ಅಬ್ದುಲ್ ಕರೀಂ ಸಖಾಫಿ ಜಯನಗರ,ಮುಹಿಯ್ಯದ್ದೀನ್ ಲತೀಫಿ ಪೈಚಾರು, ಅಬ್ದುರ್ರಹ್ಮಾನ್ ಸಖಾಫಿ ಸುಣ್ಣಮೂಲೆ ಸೇರಿದಂತೆ ಮದರಸ ಅಧ್ಯಾಪಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೇಂಜ್ ಮಿಶನರಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಜುನೈದ್ ಹಿಮಮಿ ಸಖಾಫಿ ಜಾಲ್ಸೂರ್ ವಂದಿಸಿದರು