ಎಣ್ಮೂರು ಗರಡಿಯಲ್ಲಿ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರಿಂದ ಆಶೀರ್ವಚನ, ಸಭಾ ಕಾರ್ಯಕ್ರಮ

0

ಎಣ್ಮೂರು ಶ್ರೀ ಆದಿ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಅವರು ಭೇಟಿ ನೀಡಿ ಗರಡಿಯ ಜೀರ್ಣೋದ್ಧಾರ ಕಾಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಗರಡಿಯಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಆದಿ ಗರಡಿಯ ವಿಶೇಷತೆಯನ್ನು ತಿಳಿದು, ನಾವೆಲ್ಲರೂ ಒಂದಾಗಿ ಕೆಲಸ ಕಾರ್ಯಗಳನ್ನು ಮಾಡೋಣ ಎಂದು ಹೇಳಿ ಇಲ್ಲಿಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿದರು. ಅವರು ಆಶೀರ್ವಚನ ನೀಡುತ್ತಾ ಮಾತನಾಡಿ, ಇಲ್ಲಿಗೆ ಎರಡು ಸಾರಿ ಬಂದರೂ ಪೂಜೆ ಮಾಡಲು ಗರಡಿಯ ಒಳಗೆ ಹೋದದು ಇದೇ ಮೊದಲು ಎಂದರು.
ಸುರೇಂದ್ರ ಮೋಹನ್ ಸಾರಥ್ಯದಲ್ಲಿ ಸ್ವಸ್ತಿಕ್ ಪ್ರೊಡಕ್ಷನ್ ಅರ್ಪಿಸುವ ತುಳುನಾಡ ಬಂಗಾರ್ ಗರೋಡಿಲ್ ಎಂಬ ಸಾಕ್ಷ್ಯ ಚಿತ್ರ ತಂಡಗಳು ಆಯೋಜಿಸಿದ್ದ ಈ ಸಭಾ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿದ್ದ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಅವರು ಕೋಟಿಚೆನ್ನೇರ ಸಾಕ್ಷ್ಯ ಚಿತ್ರ ನಿರ್ಮಿಸುವ ತಂಡವನ್ನು ಉದ್ದೇಶಿಸಿ ಶುಭ ಹಾರೈಸಿದರು.


ಗರಡಿಯ ಮಾಹಿತಿದಾರರಾದ ಎನ್. ಜಿ. ಲೋಕನಾಥ ರೈಯವರು ಎಣ್ಮೂರಿನಲ್ಲಿ ನೆಲೆಯಾದ ಬೈದರುಗಳ ಬಗ್ಗೆ ಕ್ಷೇತ್ರದ ಕಾರ್ಣಿಕವನ್ನು ಮಾಹಿತಿ ನೀಡಿದರು. ಚಲನಚಿತ್ರ ನಟ ನಿತೇಶ್ ಪೂಜಾರಿ, ರಶ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ರಘು ವೇದಿಕೆಯಲ್ಲಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಕುಸುಮ ಸಾರಂಗ ರಂಗ ಘಟಕದ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 40 ಮಂದಿ ಕಲಾವಿದರು, ಅಲ್ಲದೆ ಸ್ಥಳೀಯರು ಉಪಸ್ಥಿತರಿದ್ದರು. ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರನ್ನು ರಾಮಕೃಷ್ಣ ಶೆಟ್ಟಿಯವರು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಿದರು.
ಧರ್ಮಯೋಗಿ ಪ್ರೊಡಕ್ಷನ್ ಅಧ್ಯಕ್ಷ ಸುರೇಂದ್ರ ಮೋಹನ್ ವಂದಿಸಿದರು. ಕ್ಷೇತ್ರದ ದರ್ಶನ ಪಾತ್ರಿ ಪುರಂದರ ಪೂಜಾರಿ ಸಹಕರಿಸಿದರು.
(ವರದಿ ಎ.ಎಸ್ಎಸ್ ಅಲೆಕ್ಕಾಡಿ)