ಸುಳ್ಯದ ಪರಿವಾರಕಾನ ಬಳಿ ಇನೋವಾ ಕಾರು ಪಲ್ಟಿ, ಸವಾರನ ಕಾಲು ಜಖಂ

0


ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ೨೦ ಅಡಿ ಆಳಕ್ಕೆ ಉರುಳಿದ್ದು, ಅದರಲ್ಲಿದ್ದ ಓರ್ವನ ಕಾಲು ಜಖಂಗೊಂಡ ಘಟನೆ ಸುಳ್ಯದ ಪರಿವಾರಕಾನದ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.

ಮಣಿಪಾಲ ಮೂಲದ ಸಮೃದ್ಧಿ ಸೊಸೈಟಿ ಸಂಸ್ಥೆಗೆ ಸೇರಿದ ಇನೋವಾ ಕಾರು ಮಡಿಕೇರಿಗೆ ತೆರಳಿ ಮರಳಿ ಮಣಿಪಾಲಕ್ಕೆ ಹೋಗುತ್ತಿದ್ದ ಪರಿವಾರಕಾನ ಸರ್ವಿಸ್ ಸ್ಟೇಷನ್ ಬಳಿ ಈ ಘಟನೆ ಸಂಭವಿಸಿ ಕಾರು ಉರುಳಿದ ಬಳಿಕ ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಕಾರು ನಿಂತಿದೆ.
ಅಪಘಾತದಿಂದ ಕಾರಿನಲ್ಲಿದ್ದ ಓರ್ವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕ್ರೈನ್ ಮೂಲಕ ಕಾರನ್ನು ಮೇಲೆಕೆತ್ತಲಾಯಿತು.