ಪೈಚಾರ್ ಅಲ್ – ಅಮೀನ್ ಯೂತ್ ಸೆಂಟರ್ ನ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲೀಸ್ ಕಾರ್ಯಕ್ರಮಕ್ಕೆ ಚಾಲನೆ

0

ಸುಳ್ಯ ತಾಲೂಕಿನಾಧ್ಯಂತ ಸಾಮಾಜಿಕ ಚಟುವಟಿಕೆಗಳ ಮೂಲಕ ಬಡವ ಆಶಾಕಿರಣ ವಾಗಿ ಗುರುತಿಸಿಕ್ಕೊಂಡಿರುವ ಪೈಚಾರ್ ಅಲ್ -ಅಮೀನ್ ಯೂತ್ ಸೆಂಟರ್ ರಿ. ಇದರ 16 ನೇ ವಾರ್ಷಿಕ ಸ್ವಲಾತ್, ಹಾಗೂ ಬುರ್ದಾ ಮಜ್ಲೀಸ್ ಕಾರ್ಯಕ್ರಮಕ್ಕೆ ಜ 24 ರಂದು ಚಾಲನೆ ನೀಡಲಾಯಿತು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ಪೈಝಿ ವಹಿಸಿದ್ದರು.
ಸುಳ್ಯ ಜಮೀಯತುಲ್ ಉಲಾಮ ಅಧ್ಯಕ್ಷ ಸಯ್ಯಿದ್ ಕುಂಞಿ ಕೋಯಾ ತಂಙಳ್ ಸಅದಿ ನಾವೂರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯ ಮಸ್ಜಿದ್ ಖತೀಬರಾದ ಮುನೀರ್ ಸಕಾಫಿ ವಿರಾಜಪೇಟೆ ಪ್ರಾಸ್ತವಿಕ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಹನೀಫ್ ಮದನಿ ಮುಅಲ್ಲಿಮ್ ಪೈಚಾರ್,ಸಮಿತಿ ಅಧ್ಯಕ್ಷ ಸಾಲಿ ಪೈಚಾರ್,ಸ್ಥಳೀಯ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಟಿ ಎ ಶರೀಫ್,ಉಪಾಧ್ಯಕ್ಷ ರಾಜ್ಜಾಕ್ ಎ,ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೈಚಾರ್ ಕುವ್ವತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್ ಮುಹಿಯದ್ದೀನ್ ಲತೀಫಿ ಸ್ವಾಗತಿಸಿ ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಖ್ಯಾತ ಬುರ್ದಾ ಆಲಾಪನೆಕಾರರಾದ ತ್ವಾಹ ತಂಙಳ್,ಶಾಹಿನ್ ಬಾಬು, ನಾಸಿರ್ ಕ್ಯಾಲಿಕೆಟ್, ಇಶಾಂದ್ ಅಬೂಬಕ್ಕರ್ ತಂಡದಿಂದ ಬುರ್ದಾ ಆಲಾಪನ ನಡೆಯಲಿದೆ.
3 ದಿನಗಳ ಈ ಕಾರ್ಯಕ್ರಮದಲ್ಲಿ ಜ 25 ರಂದು ಖ್ಯಾತ ವಾಗ್ಮಿ ಆಶಿಕ್ ದಾರಿಮಿ ಆಲಪ್ಪುಝ ರವರು ಧಾರ್ಮಿಕ ಪ್ರಭಾಷಣ ನಡೆಸಲಿದ್ದು, ಜ.26 ರಂದು ಅಂತರಾಷ್ಟ್ರೀಯ ಖ್ಯಾತಿಗೆ ಪಾತ್ರರಾದ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಂ ರವರಿಂದ ಮದನಿಯಂ ಮಜ್ಲೀಸ್ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.