ಪಂಜದಿಂದ ಪುಳಿಕುಕ್ಕು ಕಡೆಗೆ ಕಾಡಾನೆ ಸಂಚಾರ

0

ಪಂಬೆತ್ತಾಡಿ, ಪಂಜದಲ್ಲಿ ಕಾಡಾನೆ ಜ.25 ರಂದು ರಾತ್ರಿ ಸಂಚರಿಸಿ ಬಳಿಕ ಪುಳಿಕುಕ್ಕು ಅರಣ್ಯದಲ್ಲಿ ಕಾಣಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ.
ಇದೇ ಆನೆ ಅನೇಕ ವರ್ಷಗಳಿಂದ ಸಂಚರಿಸುತ್ತಿದ್ದು
2021ಜ.8 ರಂದು ಪಂಬೆತ್ತಾಡಿ, ಪಂಜದಲ್ಲಿ ಸಂಚರಿಸಿತು.
“ಜ.25 ರಂದು ರಾತ್ರಿ ಪಂಬೆತ್ತಾಡಿಯಿಂದ ಕರಿಕ್ಕಳದಲ್ಲಿ ರಾಜ್ಯ ಹೆದ್ದಾರಿ ದಾಟಿ ಚಿಂಗಾಣಿಗುಡ್ಡೆ ಯಲ್ಲಿ ಸಂಚರಿಸಿ ಎಣ್ಮೂರು ರಕ್ಷಿತಾರಣ್ಯದ ಪುಳಿಕುಕ್ಕುನಲ್ಲಿ ಇದೆ.(ಇಂದು) ಜ.26 ರಂದು ಸಂಜೆ ಅಲ್ಲಿಂದ ಸಂಚರಿಸುವ ಸಾಧ್ಯತೆ’ ಇದೆ ಎಂದು ಪಂಜ ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ.