ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0


ಜನವರಿ 26ರಂದು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ನಿವೃತ್ತ ಯೋಧರಾದ ಬೇಬಿ ಕುಮಾರ್ ಸಾರಕೂಟೆಲ್ ನೆರವೇರಿಸಿ, ಸಂದೇಶ ನೀಡಿದರು. ಸಭಾಧ್ಯಕ್ಷತೆಯನ್ನು ಪ್ರಾಥಮಿಕ ಶಾಲಾ ಪೋಷಕರ ಸಮಿತಿಯ ಅಧ್ಯಕ್ಷರಾದ ದುರ್ಗಾ ಕುಮಾರ್ ವಹಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪೂರ್ವ ಪ್ರಾಥಮಿಕ ಶಾಲಾ ಪೋಷಕರ ಸಮಿತಿಯ ಅಧ್ಯಕ್ಷೆ ಡಾ. ಅನುರಾಧ ಕುರುಂಜಿ, ಸೈಂಟ್ ಬ್ರಿಜಿಡ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ನವೀನ್ ಮಚಾದೋ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿಸ್ಟರ್ ಮೇರಿ ಸ್ಟೆಲ್ಲಾ, ಶಾಲಾ ನಾಯಕಿಯರುಗಳಾದ ಇಂಚರ ಪಿಆರ್, ಸಾರಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂತು. ಘೋಷಣೆಯನ್ನು ಸಂಜಯ್ 9ನೇ ವಾಚಿಸಿದರು. ಸಹಶಿಕ್ಷಕ ಪುರುಷೋತ್ತಮರವರು ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು. ನಿರೀಕ್ಷಾ 9ನೇ ಸ್ವಾಗತಿಸಿ ,ಅನಿಂದ್ರಿತ ಏಳನೇ ವಂದಿಸಿ, ಅಮೂಲ್ಯ ಕೆ ಎ 9ನೇ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ, ಸಹ ಶಿಕ್ಷಕಿ ಉಷಾದೇವಿ ಹಾಗೂ ಶಿಕ್ಷಕ ವೃಂದದವರು ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು.