ಸುಳ್ಯ ಐಎಂಎ ವತಿಯಿಂದ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಭಾರತೀಯ ವೈದ್ಯಕೀಯ ಸಂಘ ಸುಳ್ಯ 74 ನೇ ಗಣರಾಜ್ಯೋತ್ಸವ ವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ತಾಲೂಕಿನ 4 ಹಿರಿಯ ನಿವೃತ್ತ ಸೈನಿಕರನ್ನು ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು. ನಿವೃತ್ತ ಸೈನಿಕರಾದ ಮಾಧವ ಪಂಜ, ಉತ್ತಪ್ಪ ಎಂ.ಸಿ,ವೀರಪ್ಪ ಕೆ., ಚೆನ್ನಪ್ಪ ಬಳ್ಳಕ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷೆ ಡಾ. ವೀಣಾ ಎನ್, ಕಾರ್ಯದರ್ಶಿ ಡಾ. ರವಿಕಾಂತ್ ಜಿ.ಓ, ಉಪಾಧ್ಯಕ್ಷ ಡಾ. ಕರುಣಾಕರ ಕೆ.ವಿ, ಖಜಾಂಚಿ
ಡಾ. ಸೌಮ್ಯ, ಸಹ ಕಾರ್ಯದರ್ಶಿ ಡಾ. ರಜನಿ,
ಡಾ. ಗೀತಾ ದೊಪ್ಪ, ಡಾ. ಶ್ರೀಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.