ಪಂಜ ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪಂಜ ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಣೆ ದಿನಾಚರಣೆಯನ್ನು ಜ.26 ರಂದು ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರಿಮತಿ ಪೂರ್ಣಿಮಾ ದೇರಾಜೆ ರವರು ಧ್ವಜಾರೋಹಣ ಮಾಡಿ ಶುಭ ಹಾರೈಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್ ಸ್ವಾಗತಿಸಿ ವಂದಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಪಂಜ ಗ್ರಾಮ ಪಂಚಾಯತ್ ನಿಂದ ವರ್ಗವಾಣೆಗೊಂಡ ಕಾರ್ಯದರ್ಶಿ ಕೆ ಪದ್ಮಯ್ಯ, ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಕೃಷ್ಣನಗರ, ಚಂದ್ರಶೇಖರ್ ದೇರಾಜೆ, ಲಿಖಿತ್ ಪಲ್ಲೋಡಿ, ಶರತ್ ಕುದ್ವ, ಶ್ರೀಮತಿ ವೀಣಾ ಪಂಜ, ಗ್ರಂಥಪಾಲಕಿ ಶ್ರೀಮತಿ ಚಿತ್ರಕಲಾ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗೀರಥಿ, ಆಶಾ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ , ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬೀಳ್ಕೊಡುಗೆ :
ಪಂಜ ಗ್ರಾಮ ಪಂಚಾಯತ್ ವರ್ಗಾವಣೆಗೊಂಡು
ಪ್ರಸ್ತುತ ಕಳಂಜ ಗ್ರಾಮ ಪಂಚಾಯತ್ ನ ಪ್ರಭಾರ ಅಭಿವೃದ್ಧಿ ಅಧಿಕಾರಿಯವರಾಗಿರುವ ಕೆ. ಪದ್ಮಯ್ಯ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನಡೆಯಿತು.