ಅರಂಬೂರಿನಲ್ಲಿ ಯಕ್ಷ ಸಂಭ್ರಮ- ಅಣ್ಣಪ್ಪ ಸ್ವಾಮಿ ಯಕ್ಷಗಾನ ಮೇಳದ ಪ್ರಥಮ ಪ್ರದರ್ಶನ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಅಭಿರಾಮ್ ಭಟ್ ಸಂಚಾಲಕತ್ವದ ಶ್ರೀ ಮೂಕಾಂಬಿಕಾ ಮಕ್ಕಳ ಯಕ್ಷಗಾನ ತಂಡ ಹಾಗೂ ಉಮೇಶ್ ಅಜಿಲ ರವರ ನೇತೃತ್ವದಲ್ಲಿ ಅಣ್ಣಪ್ಪ ಸ್ವಾಮಿ ಯಕ್ಷಗಾನ ಮೇಳದ ತಿರುಗಾಟದ ಪ್ರಥಮ ಪ್ರಸಂಗದ ಪ್ರದರ್ಶನದ ಪ್ರಯುಕ್ತ ಯಕ್ಷ ಸಂಭ್ರಮ ಕಾರ್ಯಕ್ರಮವು ಜ.21 ರಂದು ನಡೆಯಿತು.

ಯಕ್ಷ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಿರಿಯರಾದ ನಿವೃತ್ತ ಶಿಕ್ಷಕ ಕೊರಗಪ್ಪ ಮಾಸ್ತರ್ ಕಣಕ್ಕೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಪಂಚಾಯತ್ ಸದಸ್ಯರಾದ. ಸುದೇಶ್ ಅರಂಬೂರು, ರತೀಶನ್ ಅರಂಬೂರು, ಜಯಲತಾ ಅರಂಬೂರು, ವೇದಾವತಿ ನೆಡ್ಚಿಲು, ದೈವ ನರ್ತಕ ಜಯರಾಮ ಬೊಳಿಯಮಜಲು, ಬಾಬು ಅಜಿಲ ಅರಂಬೂರು, ಬಾಬು ಅಜಿಲ ಬಾಳಿಲ, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು, ಒಡಿಯೂರು ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕೂಟೇಲು, ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನಿರ್ದೇಶಕರಾದ ಭೋಜಪ್ಪ ಗೌಡ ಮರ್ಕಂಜ ರವರನ್ನು ಸನ್ಮಾನಿಸಲಾಯಿತು.
ಬಳಿಕ ಸ್ಥಳೀಯ ಭಜಕರಿಂದ ಕುಣಿತ ಭಜನೆಯು ನಡೆದು ಚೌಕಿ‌ ಪೂಜೆಯಾಗಿ ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.ರಾತ್ರಿ ಭೋಜಪ್ಪ ಗೌಡ ಮರ್ಕಂಜ ನಿರ್ದಶನದ ಶ್ರೀ ಮೂಕಾಂಬಿಕಾ ಯಕ್ಷಗಾನ ಮಕ್ಕಳ ತಂಡದವರಿಂದ ಶ್ರೀ ದೇವಿ ಪ್ರತ್ಯಕ್ಷ ಯಕ್ಷಗಾನ ಹಾಗೂ ಅಣ್ಣಪ್ಪ ಸ್ವಾಮಿ ಯಕ್ಷಗಾನ ಮೇಳದವರಿಂದ ರತ್ನ ಮಾಲಿನಿ ತುಳು ಪ್ರಸಂಗ ಪ್ರದರ್ಶನವಾಯಿತು. ಮೇಳದ ವ್ಯವಸ್ಥಾಪಕ ಉಮೇಶ್ ಅಜಿಲ ಅರಂಬೂರು ಸ್ವಾಗತಿಸಿದರು.