ಪಂಜ: ಪ್ರಣಮ್ ಸಂಕಡ್ಕ ಚಿತ್ರಕಲಾ ಸ್ಪರ್ಧೆಯಲ್ಲಿ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಲಯನ್ಸ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಆಯೋಜಿಸಿದ್ದ ವಿಶ್ವ ಶಾಂತಿಯ ಸಂದೇಶದ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬ್ ನ್ನು ಪ್ರತಿನಿಧಿಸಿ, 317 ಡಿ ಲಯನ್ಸ್ ಜಿಲ್ಲೆ ಹಾಗೂ ಮಲ್ಟಿಪಲ್ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಣಮ್ ಸಂಕಡ್ಕ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಉಡುಪಿ, ಕೊಡಗು, ಹಾಸನ,ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ವ್ಯಾಪ್ತಿಯ 317 ಡಿ ಲಯನ್ಸ್ ಜಿಲ್ಲೆಯ ಸುಮಾರು 120 ಕ್ಲಬ್ ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಣಮ್ ಸಂಕಡ್ಕಕಡಬ ಸೈಂಟ್ ಆನ್ಸ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ.ಪಂಜದ ಚಿನ್ನಪ್ಪ ಸಂಕಡ್ಕ ಮತ್ತು ಭಾರತಿ ದಂಪತಿಗಳ ಪುತ್ರ.
ಇವನಿಗೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿಯನ್ನು ನೀಡಿರುತ್ತಾರೆ.