ಜಾಲ್ಸೂರು: ಸ್ವಚ್ಛಕಿರಣ ಸ್ವಚ್ಛತಾ ತಂಡ ರಚನೆಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆ

0

ಗ್ರಾಮದ ಏಳು ಅಂಗನವಾಡಿ ಕೇಂದ್ರದಲ್ಲಿ ಫಲವಸ್ತು ಗಿಡ ನೆಡುವ ಕಾರ್ಯಕ್ರಮ

ಜಾಲ್ಸೂರು ಗ್ರಾಮದ ಸ್ವಚ್ಛಕಿರಣ ಸ್ವಚ್ಛತಾ ತಂಡವು ಪ್ರಾರಂಭಗೊಂಡು ಯಶಸ್ವಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಜಾಲ್ಸೂರು ಗ್ರಾಮದ 7 ಅಂಗನವಾಡಿ ಕೇಂದ್ರಗಳಲ್ಲಿ ಫಲವಸ್ತು ಗಿಡಗಳನ್ನು ನೆಡುವ ಕಾರ್ಯಕ್ರಮವು ಜ.26ರಂದು ಜರುಗಿತು.

ಈ ಸಂದರ್ಭದಲ್ಲಿ ಸ್ವಚ್ಛಕಿರಣ ತಂಡದ ಗೌರವಾಧ್ಯಕ್ಷ ಕೃಷ್ಣಪ್ಪ ನಾಯ್ಕ ಮಹಾಬಲಡ್ಕ, ವಿನೋದ್ ಕುಮಾರ್ ಮಹಾಬಲಡ್ಕ, ಮುರಳೀಧರನ್ ಕೆಮನಬಳ್ಳಿ, ಸುಪ್ರೀತ್ ಎಂ. ಎಸ್. ಮಹಾಬಲಡ್ಕ, ಸತ್ಯಶಾಂತಿ ತ್ಯಾಗಮೂರ್ತಿ ಕುಕ್ಕುಂದೂರು, ಶ್ರೀಮತಿ ವೀಣಾ ಸುನಿಲ್ ಅಡ್ಕಾರು, ಸುಚಿತ್ರಾ ಎನ್. ಅಡ್ಕಾರು, ಪ್ರೇಮ ಮಹಾಬಲಡ್ಕ, , ಬೇಬಿ ಮಹಾಬಲಡ್ಕ ಸೇರಿದಂತೆ ಸ್ವಚ್ಛಕಿರಣ ತಂಡದ ಸದಸ್ಯರುಗಳು ಭಾಗವಹಿಸಿದ್ದರು. ಜಾಲ್ಸೂರು ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಪೋಷಕರು ಉಪಸ್ಥಿತರಿದ್ದರು.