ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಪುತ್ತೂರು ಶಾಖೆಯ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಕೆ. ವಿ. ದಯಾನಂದ ಕೋಡಿ ನಿವೃತ್ತಿ

0

ಸರಕಾರಿ ಸ್ವಾಮ್ಯದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ ಸುದೀರ್ಘ 37 ವರ್ಷಗಳ ಸೇವೆ ಸಲ್ಲಿಸಿರುವ, ಅಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿರುವ ದಯಾನಂದ ಕೆ.ವಿ.ರವರು ಜ.31ರಂದು ತಮ್ಮ ವೃತ್ತಿಯಿಂದ ನಿವೃತ್ತರಾದರು.

ಇವರು ಪೆರಾಜೆಯ ಕೋಡಿ ಮನೆತನದ ದಿ. ಕೋಡಿ ವೆಂಕಪ್ಪ ಗೌಡ ಮತ್ತು ದಿ. ಗೌರಮ್ಮ ದಂಪತಿಯ ಪುತ್ರರಾಗಿ 1963ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಪೆರಾಜೆಯ ಅಮಚೂರು, ಕುಂಬಳಚೆರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಪ್ರೌಡ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜ್ ಸುಳ್ಯದಲ್ಲಿ, ಮತ್ತು ಪದವಿ ಶಿಕ್ಷಣವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಮುಂದೆ ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಎಂ. ಎ. ಪದವಿ ಪಡೆದು 1986ರಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಮಡಿಕೇರಿ ಶಾಖೆಯಲ್ಲಿ ಸಹಾಯಕರಾಗಿ ನೇಮಕಗೊಂಡರು. 2000ದಲ್ಲಿ ಹಿರಿಯ ಸಹಾಯಕರಾಗಿ ಭಡ್ತಿ ಹೊಂದಿ ಮಂಡ್ಯ ಶಾಖೆಗೆ ವರ್ಗಾವಣೆಗೊಂಡರು. 2007ರಲ್ಲಿ ಪುತ್ತೂರು ಶಾಖೆಗೆ ವರ್ಗಾವಣೆಗೊಂಡು ತದನಂತರ ತಮ್ಮ ಸೇವಾ ಅವಧಿಯ 2016ನೇ ಇಸವಿಯಲ್ಲಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿ ಪದೋನ್ನತಿ ಹೊಂದಿದರು. ವಿವಿಧ ಹುದ್ದೆಗಳಲ್ಲಿ ತಮ್ಮ ಸುದೀರ್ಘ ಸೇವೆ ಸಲ್ಲಿಸಿದ ಇವರು ಸೇವಾ ಅವಧಿಯಲ್ಲಿ ತಮ್ಮ ಪ್ರಾಮಾಣಿಕ ಸೇವೆಗೆ ಸಂಸ್ಥೆಯಲ್ಲಿ ಉತ್ತಮ ಹೆಸರು ಗಳಿಸಿ ಜನಾನುರಾಗಿಯಾಗಿದ್ದರು.


ಇವರ ಪತ್ನಿ ಕೂಜುಗೋಡು – ಕಟ್ಟೆಮನೆ ಮನೆತನದ ದಿ. ಮಲ್ಲಯ್ಯ ಗೌಡ ಮತ್ತು ದಿ. ಯಶೋದರವರ ಪುತ್ರಿ ಶ್ರೀಮತಿ ತಿರುಮಲೇಶ್ವರಿ. ಇಬ್ಬರು ಪುತ್ರರಾದ ಕೌಶಿಕ್ ಮತ್ತು ಶಶಾಂಕ್ ಎಂಜಿನಿಯರ್ ಪದವೀಧರರು. ಪ್ರಸ್ತುತ ಮಕ್ಕಳೊಂದಿಗೆ ಸುಳ್ಯದ ಕಾಯ
ರ್ತೋಡಿಯಲ್ಲಿ ವಾಸವಿದ್ದಾರೆ.