ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ನಾಗಪಟ್ಟಣ ಘಟಕ ಸಮಿತಿ ರಚನೆ

0

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ನಾಗಪಟ್ಟಣ ಘಟಕ ಸಮಿತಿ ರಚನೆ ಫೆಬ್ರವರಿ 5 ರಂದು ನಡೆಯಿತು.
ಸ್ಥಳೀಯ ಮುಖಂಡರಾದ ಅರಸುರತ್ನ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ರಾಜ್ಯ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ವಹಿಸಿದ್ದರು.
ನೂತನವಾಗಿ ರಚಿಸಿದ ನಾಗ ಪಟ್ಟಣ ಘಟಕದ ಗೌರವ ಅಧ್ಯಕ್ಷರಾಗಿ ಅರಸುರತ್ನಂ, ಅಧ್ಯಕ್ಷರಾಗಿ ಚಂದ್ರಶೇಖರ ಎಂ ಎನ್, ಕಾರ್ಯದರ್ಶಿಯಾಗಿ ಗುರುರಾಜ್, ಜೊತೆ ಕಾರ್ಯದರ್ಶಿಯಾಗಿ ಶ್ರೀಕಾಂತ್, ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜೇಶ ಜಗದೀಶ ಮುನಿಸ್ವಾಮಿ ಗೋವಿಂದರಾಜ್ ಕಾರ್ತಿಕ್ ಅಶೋಕ್ ಪುಷ್ಪರಾಜ್ ಕದಿರ್ ವೇಲ್ ಹೇಮನಾಥ ಪ್ರಸಾದ್ ಕುಮಾರ್ ಪುರುಷೋತ್ತಮ ಕರುಣಕಾರ ಶಶಿಕುಮಾರ್ ಲತೀಶ ಜಯಪ್ರಕಾಶ್ ಜಯಂತ ಎಂ ಎಸ್ ಸುಬ್ರಹ್ಮಣ್ಯ ಮತ್ತು ಇತರರು ಉಪಸ್ಥಿತರಿದ್ದರು.