ಮಾವಿನಕಟ್ಟೆ – ಕಂದ್ರಪ್ಪಾಡಿ,ಗುರುಪುರ – ಮಡಪ್ಪಾಡಿ ರಸ್ತೆ ಕಾಂಕ್ರೀಟೀಕರಣ

0

ಸಚಿವ ಎಸ್.ಅಂಗಾರರಿಂದ ರಸ್ತೆ ಉದ್ಘಾಟನೆ

ಮಾವಿನಕಟ್ಟೆ – ಕಂದ್ರಪ್ಪಾಡಿ,ಗುರುಪುರ – ಮಡಪ್ಪಾಡಿ ರಸ್ತೆ ಕಾಂಕ್ರೀಟೀಕರಣ ಹಾಗೂ ಗುರುಪುರ ಎಂಬಲ್ಲಿ ಸರ್ಕಲ್ ನಿರ್ಮಾಣವಾಗಿದ್ದು ಒಟ್ಟು ,50 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿ ನಡೆದಿದೆ.


ಇದರ ಉದ್ಘಾಟನೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿನಯ್ ಮುಳುಗಾಡು, ಪ್ರಮುಖರಾದ ಜಯರಾಮ ಹಾಡಿಕಲ್ಲು, ಕರುಣಾಕರ ಮಡಪ್ಪಾಡಿ, ಭವಾನಿಶಂಕರ ಮಡಪ್ಪಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.