ಕಲ್ಮಡ್ಕ ಗ್ರಾಮದ ಬಡ ಮಹಿಳೆಯ ಸ್ವಾಧೀನ ಸ್ಥಳವನ್ನು ಸ್ಥಳೀಯ ನಿವಾಸಿ ಅತಿಕ್ರಮಣ ಮಾಡಿರುವ ಮಾಡಿರುವ ಆರೋಪ*, *ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆ ನೀಡಿದ: ಜಿಲ್ಲಾ ದಲಿತ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಬೆದ್ರ ಕಾಡು

0

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ದಿ.ಬಾಬು ಅಜಿಲ ಬೊಮ್ಮಟ್ಟಿ ಮನೆ ಇವರ ಪತ್ನಿ ಸೀತಮ್ಮ ಎಂಬುವವರು ತಮ್ಮ ಹಿರಿಯರ ಕಾಲದಿಂದಲೂ ಸ್ವಾಧೀನಹೊಂದಿದ್ದ ಸ್ಥಳವನ್ನು ಸ್ಥಳೀಯರೋರ್ವರು ಅತಿಕ್ರಮಣ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸ್ಪಂದಿಸಿ ಆ ಜಾಗವನ್ನು ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ ಕೆ ಶೇಷಪ್ಪ ಬೆದ್ರಕಾಡು ಫೆಬ್ರವರಿ 7 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಅದೇ ಸ್ಥಳದಲ್ಲಿ ಸೀತಮ್ಮರವರ ಕುಟುಂಬಸ್ಥರ ಹಿರಿಯರ ಮತ್ತು ಪತಿಯವರ ಸಮಾಧಿಗಳಿದ್ದು ಈ ಜಾಗದಲ್ಲಿದ್ದು ಸ್ಥಳೀಯ ನಿವಾಸಿ ಕಾರ್ತಿಕ್ ಭಟ್ ಎಂಬುವವರು ಈ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಪಿ ಮೂಲಕ ಜಾಗ ಸಮತಟ್ಟು ಮಾಡಿ ಅತಿಕ್ರಮಣ ಮಾಡಿರುತ್ತಾರೆ.ಇದರ ಬಗ್ಗೆ 2022 ಅಕ್ಟೋಬರ್ 27ರಂದು ತಹಶೀಲ್ದಾರರಿಗೆ ಹಾಗೂ ಸಹಾಯಕ ಉಪ ಆಯುಕ್ತರು ಪುತ್ತೂರು ಇವರುಗಳಿಗೆ ದೂರನ್ನು ನೀಡಿದ್ದು ಈ ಬಗ್ಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರು ಸ್ಥಳ ಪರಿಶೀಲನೆ ಮಾಡಿ ಯಥಾ ಸ್ಥಿತಿ ಕಾಪಾಡುವಂತೆ ಎರಡು ಕಡೆಯವರಿಗೆ ಮೌಖಿಕವಾಗಿ ತಿಳಿಸಿರುತ್ತಾರೆ.ಇದೀಗ ಕಾರ್ತಿಕ್ ಭಟ್ ರವರು ಸೀತಮ್ಮನವರು ಮನೆಯಲ್ಲಿ ಇಲ್ಲದ ಸಂದರ್ಭ ಆ ಜಾಗದಲ್ಲಿ ಜೆಸಿಪಿ ಮೂಲಕ ಗುಂಡಿ ತೆಗೆದು ಅಡಿಕೆ ಗಿಡಗಳನ್ನು ನೆಟ್ಟಿರುತ್ತಾರೆ.ಮತ್ತು ನೀರಿನ ಪೈಪುಗಳನ್ನು ಅಳವಡಿಸಿರುತ್ತಾರೆ.

ಇದರ ಬಗ್ಗೆ ಕಂದಾಯ ನಿರೀಕ್ಷಕರ ಗಮನಕ್ಕೆ ಸೀತಮ್ಮ ರವರು ವಿಷಯವನ್ನು ತಿಳಿಸಿದಾಗ ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಇವರ ಈ ನಡವಳಿಕೆಯನ್ನು ನೋಡಿದರೆ ಕಂದಾಯ ನಿರೀಕ್ಷಕರು ಕಾರ್ತಿಕ್ ಭಟ್ ರವರೊಂದಿಗೆ ಸೇರಿಕೊಂಡು ಬಡ ಮಹಿಳೆಯಮೇಲೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗೋಚರಿಸುತ್ತಿದ್ದು ಏಳು ದಿನಗಳೊಳಗೆ ಈ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಅತಿಕ್ರಮಣ ಮಾಡಿರುವ ಜಾಗವನ್ನು ತೆರವುಗೊಳಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಮುಂದೆ ಸಂಘಟನೆಯ ಕಾರ್ಯಕರ್ತರುಗಳನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡುವುದಾಗಿ ಈ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆಯನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ.

ಬಳಿಕ ಏನಾದ್ರು ಅನಾಹುತಗಳು ಸಂಭವಿಸಿದ್ದಲ್ಲಿ ಅದಕ್ಕೆ ಕಂದಾಯ ಅಧಿಕಾರಿಗಳೆ ಹೊಣೆ ಎಂದು ಅವರು ಹೇಳಿದ್ದಾರೆ.

*ದಲಿತ ಮುಖಂಡನ ಮೇಲೆ ನಡೆದಿದೆ ಎನ್ನಲಾಗಿರುವ ಹಲ್ಲೆ ಖಂಡನೀಯ*

ಇದೇ ಸಂದರ್ಭದಲ್ಲಿ ಮಾತಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಯವರ ಮೇಲೆ ಪುತ್ತೂರಿನಲ್ಲಿ ನಡೆದಿದೆ ಎನ್ನಲಾದ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ. ದಲಿತ ಸಂಘಟನೆಗಳ ಮುಖಂಡರು ನೊಂದವರ ಪರವಾಗಿ ನ್ಯಾಯದ ಬೇಡಿಕೆಗಾಗಿ ನಿಲ್ಲುವಂತವರಾಗಿದ್ದಾರೆ. ಆದ್ದರಿಂದ ಅಂತಹ ಮುಖಂಡರ ಮೇಲೆ ಹಲ್ಲೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು ವಿಟ್ಲ, ಸದಸ್ಯರಾದ ರಾಮಣ್ಣ ಪಂಜ, ನೊಂದ ಕುಟುಂಬದ ಸದಸ್ಯ ಭರತ್ ಕಲ್ಮಡ್ಕ ಉಪಸ್ಥಿತರಿದ್ದರು.