ಆಟೋ ರಿಕ್ಷಾ ಚಾಲಕರ ಸಂಘದ ವಾರ್ಷಿಕ ಮಹಾಸಭೆ

0

ಅಧ್ಯಕ್ಷ : ರಾಧಾಕೃಷ್ಣ ಬೈತಡ್ಕ, ಪ್ರಧಾನಕಾರ್ಯದರ್ಶಿ : ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ : ನಿತ್ಯಾನಂದ ಕುರುಂಜಿಭಾಗ್

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ 24ನೇ ವಾರ್ಷಿಕ ಮಹಾಸಭೆಯು ಫೆಬ್ರವರಿ 11ರಂದು
ಹಳಗೇಟ್ ಬಳಿ ನೂತನ ಕಾರ್ಮಿಕ ಸಮುದಾಯ ತಿಲಕ ಭವನ ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ಬೈತಡ್ಕ,ಅಧ್ಯಕ್ಷತೆ ವಹಿಸಿದ್ದರು.

ಅಭ್ಯಾಗತರಾಗಿ. ಬಿ ಯಂ ಯಸ್ ಆಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷರಾದ ಗೋಪಾಲಕೃಷ್ಣ ಭಟ್, ನಮ್ಮ ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಪಿ ಭಾಸ್ಕರ್ ರಾವ್, ಬಿ ಯಂ ಯಸ್ ಜಿಲ್ಲಾ ಅಧ್ಯಕ್ಷರಾದ ಅನಿಲಕುಮಾರ್. ಸಂಘದ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ಗಿರೀಶ್ ಅಡೂರು, ಮಾಜಿ ಅಧ್ಯಕ್ಷ ವಿಜಯಕಮಾರ್ ಉಬರಡ್ಕ, ಸುಳ್ಯ ತಾಲೂಕು ಘಟಕಗಳ ಅಧ್ಯಕ್ಷರುಗಳಾದ, ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಯಶೋಧರ, ಪಂಜ ಘಟಕದ ಅಧ್ಯಕ್ಷ ಮನೋಹರ ಕಾರ್ಜ,ಕುಕ್ಕುಜಡ್ಕ ಅಧ್ಯಕ್ಷ. ಶಿವರಾಜ್ ಜಾಲ್ಸೂರು ಘಟಕದ ಅಧ್ಯಕ್ಷ ಗೋಪಾಲ ಪದವು, ಪೆರಾಜೆ ಘಟಕದ ಅಧ್ಯಕ್ಷ ಚಂದ್ರಶೇಖರ ಕೊಡ್ಯಗುಂಡಿ, ಕಲ್ಲುಗುಂಡಿ ಘಟಕದ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು .ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ಬೈತಡ್ಕ 5ನೇ ಬಾರಿಗೆ ಪುನರಾಯ್ಕೆ ಯಾದರು. ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ 3ನೇ ಬಾರಿಗೆ ಆಯ್ಕೆಯಾದರು. ಎಲ್ಲಾ ಪಾರ್ಕಿಂಗ್ ನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ರವಿ ಜಾಲ್ಸೂರು, ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ್ ಚೊಕ್ಕಾಡಿ,
ಜತೆ ಕಾರ್ಯದರ್ಶಿಯಾಗಿ ಸುರೇಂದ್ರ ಕಾಮತ್ ಜಯನಗರ, ಕೋಶಾಧಿಕಾರಿಯಾಗಿ ನಿತ್ಯಾನಂದ ಅರಂಬೂರು ಆಯ್ಕೆಯಾದರು. ಪದಾಧಿಕಾರಿಗಳಾಗಿ ಬಸ್ ನಿಲ್ದಾಣದಿಂದ ಪ್ರಕಾಶ್ ಯಂ ಯಸ್, ಹರೀಶ್ ನೆಕ್ರಾಜೆ, ಗಾಂಧಿನಗರದಿಂದ ರೋಹಿತ್ ಕೆ ಎ, ಕಾರ್ತಿಕ್ ಯಂ, ಚಿದಾನಂದ ಯಸ್ ಯಂ
ರಥಬೀದಿಯಿಂದ ಪ್ರಸನ್ನ ಕುಮಾರ್ ತುದಿಯಡ್ಕ, ಸುದರ್ಶನ್ ಕೊಲ್ಚರ್,
ಕುರುಂಜಿಭಾಗ್ ನಿಂದ ಜಯಂತ ಮಡಿವಾಳ, ಸಂಗಪ್ಪ ಮರಿಗೌಡರ,
ಮಾರ್ಕೆಟ್ ರಸ್ತೆಯಿಂದ ಚಾಮಯ್ಯ ಎ,
ಗೋಪಿಕಾ ಪಾರ್ಕಿಂಗ್ ನಿಂದ ಮಹೇಶ್, ಶಿವಾನಂದ, ಶ್ರೀರಂಪೇಟೆಯಿಂದ ಮೋಹನ್ ಚೊಕ್ಕಾಡಿ, ಪೈಚಾರಿನಿಂದ ಸುಧಾಕರ್ ಶಾಂತಿನಗರ , ಜಗದೀಶ, ಆಯ್ಕೆಯಾದರು .ರಕ್ತದಾನಿಗಳಿಗೆ ಅಭಿನಂದನೆ, ಪ್ರಾಮಾಣಿಕ ಚಾಲಕರಿಗೆ, 100% ಸದಸ್ಯತ್ವ ಹೊಂದಿದ ಪಾರ್ಕಿಂಗ್ ನವರಿಗೆ ಗೌರವಿಸಲಾಯಿತು.


ದಿ| ಬಾಲಗಂಗಾಧರ ತಿಲಕ ಸ್ಮರಣಾರ್ಥ ಎಸ್ ಎಸ್ ಎಲ್ ಸಿ ಮೇಲ್ಪಟ್ಟ 60% ಕ್ಕಿಂತ ಅಧಿಕ ಅಂಕಗಳಿಸಿದ ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಕಲೆ ಹಾಗೂ ಕ್ರೀಡೆಯಲ್ಲಿ ತಾಲೂಕು, ಜಿಲ್ಲಾ , ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು.


ನಮ್ಮ ಸಂಘದ ಸುಬ್ರಹ್ಮಣ್ಯ ಸದಸ್ಯರಿಗೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಯಂ ನೌಕರರಾಗಿ ಆಯ್ಕೆಯಾಗಿರುವ 8 ಜನ ಸದಸ್ಯರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ನಮ್ಮ ಸಂಘದ ಸ್ಥಾಪಕಾಧ್ಯಕ್ಷರಾಗಿರುವ ಪಿ ಗೋಪಾಲಕೃಷ್ಣ ಭಟ್ ರಿಗೆ 75 ನೇ ಅಮೃತಮಹೋತ್ಸವಕ್ಕೆ ಸನ್ಮಾನಿಸಿ ಗೌರವಿಸಲಾಯಿತು.


ಸಂಘದಲ್ಲಿ ಸುಮಾರು 16 ವರ್ಷಗಳ ಕಾಲ ಅತ್ಯುತ್ತಮವಾಗಿ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಗಿರೀಶ್ ಅಡೂರು ಇವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ತದನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸುರೇಂದ್ರ ಕಾಮತ್ ಸ್ವಾಗತಿಸಿದ ಕಾರ್ಯಕ್ರಮವನ್ನು ನಾರಾಯಣ ಎಸ್ ಯಂ ಹಾಗೂ ಸುರೇಂದ್ರ ಕಾಮತ್ ನಿರೂಪಣೆ ಮಾಡಿದರು. ಚಂದ್ರಶೇಖರ ಮರ್ಕಂಜ ಧನ್ಯವಾದ ಹೇಳಿದರು.

ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಕೊನೆಗೊಂಡಿತು.ಎಲ್ಲರಿಗೂ ಊಟ ಹಾಗೂ ಚಹಾ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.